- ಪಶ್ಚಿಮ ಬಂಗಾಳದ ಜೈನ ಪರಂಪರೆಯ ಕೇಂದ್ರಗಳ ಸುತ್ತ ಒಂದು ಪಯಣ.
- 4 ದಿನಗಳ ಕ್ಷೇತ್ರ ಕಾರ್ಯ.
- 800 ಕಿಲೋಮೀಟರ್ ಪಯಣ.
- 26 ಜೈನ ಪರಂಪರೆ ಕೇಂದ್ರಗಳು.
- ಪಶ್ಚಿಮ ಬಂಗಾಳದ ಪುರುಲಿಯಾ ಮತ್ತು ಬಾಂಕುರಾ ಜಿಲ್ಲೆಗಳ ಜೈನ ಅವಶೇಷಗಳು, ವಿಗ್ರಹಗಳು ಮತ್ತು ದೇವಾಲಯಗಳ ಸುತ್ತ ಒಂದು ಪಯಣ.
- ಎಲ್ಲಾ ಜೈನ ಪರಂಪರೆಯ ಕೇಂದ್ರಗಳು ಜೈನರ ಅತ್ಯಂತ ಪವಿತ್ರ ತೀರ್ಥಕ್ಷೇತ್ರವಾದ ತೀರ್ಥರಾಜ ಸಮ್ಮೇದ ಶಿಖರ್ಜಿಯಿಂದ ಕೇವಲ 150 ಕಿಮೀ ದೂರದಲ್ಲಿವೆ.
- ಜೈನ ವಿದ್ವಾಂಸರ ಮಾರ್ಗದರ್ಶನ.
- ಸರಾಕ್ ಜೈನರ ನಿಸ್ವಾರ್ಥ ಸೇವೆ.
- ಶ್ರೀ ಭಾರತವರ್ಷೀಯ ದಿಗಂಬರ ಜೈನ ಮಹಾಸಭಾದ ಬೆಂಬಲ.
- ಸ್ಥಳೀಯ ಸಂಶೋಧಕರು ಮತ್ತು ಸಮರ್ಪಿತ ವ್ಯಕ್ತಿಗಳ ಸಹಕಾರ.
- WWW.JAINHERITAGECENTRES.COM – ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ ತಂಡದ ಒಂದು ಅಭಿಯಾನ.
ಅನನ್ಯ ತೀರ್ಥಂಕರ ಶಿಲ್ಪಗಳು, ಅಷ್ಟ ದಿಕ್ಪಾಲಕರೊಂದಿಗಿನ ಶಿಲ್ಪಗಳು, ವಿವಿಧ ಅಂಬಿಕಾ ದೇವಿಯ – ಕೂಷ್ಮಾಂಡಿನಿ ಅಮ್ಮನವರ ವಿಗ್ರಹಗಳು, ಜೈನ ದೇವಾಲಯಗಳು ಮತ್ತು ಅವಶೇಷಗಳು ಜೈನಧರ್ಮದ ಗತಕಾಲದ ವೈಭವಕ್ಕೆ ಸಾಕ್ಷಿಯಾಗಿ ನಿಂತಿವೆ. ಅಹಿಂಸಾ ಧರ್ಮದ ಪ್ರತಿಪಾದಕರಾದ ತೀರ್ಥಂಕರರ ಹಲವು ವಿಗ್ರಹಗಳು ಇಂದಿಗೂ ಪ್ರಾಣಿಬಲಿ ನಡೆಯುತ್ತಿರುವ ಹಿಂದೂ ದೇವಾಲಯಗಳ ನಡುವೆ ಕಾಣಬಹುದು. ಜೈನಧರ್ಮದ ದುಸ್ಥಿತಿಯನ್ನು ಕಂಡು ಮಮ್ಮಲ ಮರುಗಿದೆವು, ಕಣ್ಣಾಲಿಗಳು ಒದ್ದೆಯಾದವು. ಜೈನರು ಎಚ್ಚೆತ್ತುಕೊಂಡು ಪುರಾತನ ಜೈನ ಪರಂಪರೆಯನ್ನು ಸಂರಕ್ಣಿಸಬೇಕು. ಇಲ್ಲದಿದ್ದರೆ, ಈ ಅಹಿಂಸಾ ಧರ್ಮದ ಅವನತಿಗೆ ನಾವೇ ಹೊಣೆಯಾಗುತ್ತೇವೆ.
ನಮ್ಮ ಪ್ರಯಾಣದ ಕಿರು ನೋಟಕ್ಕಾಗಿ ಈ ವೀಡಿಯೊ ವೀಕ್ಷಿಸಿ. ಪಶ್ಚಿಮ ಬಂಗಾಳದ ಶ್ರೀಮಂತ ಜೈನ ಪರಂಪರೆಯನ್ನು ದಾಖಲಿಸುವ ವಿಶೇಷ ಲೇಖನ ಹಾಗೂ ವೀಡಿಯೊಗಳನ್ನು ನಿರೀಕ್ಷಿಸಿ.