ಕುಂದಾದ್ರಿ, ವರಾಂಗ, ೧ ನವೆಂಬರ್ ೨೦೨೨: ಜೈನ ಪರಂಪರೆ ಕೇಂದ್ರಗಳ ಹಾಗೂ ಜೈನ ವಿಗ್ರಹಗಳ ಹದಿನೈದು ಪೋಸ್ಟ್ ಕಾರ್ಡುಗಳನ್ನು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ವರಾಂಗದ ಕೆರೆಬಸದಿಯ ಆವರಣದಲ್ಲಿ ದಿನಾಂಕ ೧ ನವೆಂಬರ್ ೨೦೨೨ರಂದು ಸಂಜೆ ೪ಕ್ಕೆ ಬಿಡುಗಡೆ ಮಾಡಿದರು.
ಈ ಎಲ್ಲ ಅಂಚೆ ಕಾರ್ಡುಗಳನ್ನು ಹೊಂಬುಜ ಜೈನ ಮಠದ ಪ್ರಾಯೋಜಕತ್ವದಲ್ಲಿ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ಶುಭಾಶೀರ್ವಾದದಿಂದ ಹೊರತರಲಾಗಿದೆ.
ತಂಡದ ಕಾರ್ಯ – ಈ ಕಾರ್ಯವು ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಿದುದರ ಫಲ ಎಂದರೆ ಅತಿಶಯೋಕ್ತಿಯಾಗಲಾರದು. ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಈ ಕಾರ್ಯಕ್ಕೆ ಆಶೀರ್ವದಿಸಿ ಪ್ರಾಯೋಜಿಸಿದ್ದಾರೆ. ಇಡೀ ಕಾರ್ಯದ ಮುಂದಾಳತ್ವವನ್ನು ಶಿಕ್ಷಣತಜ್ಞ ಹುಬ್ಬಳ್ಳಿಯ ಮಹಾವೀರ್ ಕುಂದೂರ್ ವಹಿಸಿದ್ದರು. ಜೈನ ಕ್ಷೇತ್ರಗಳ ಹಾಗೂ ವಿಗ್ರಹಗಳ ಮನೋಜ್ಞವಾದ ಚಿತ್ರಗಳನ್ನು ಮಾಂಡೋವಿ ಮೋಟಾರ್ಸ್ ನ ಉಪಾಧ್ಯಕ್ಷರಾದ ಶ್ರೀ ನೆರoಕಿ ಪಾರ್ಶ್ವನಾಥ; ಎಲ್ಲ ಅಂಚೆ ಕಾರ್ಡುಗಳಿಗೆ ಶೀರ್ಷಿಕೆ ಹಾಗೂ ಇತಿಹಾಸವನ್ನು ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ ನ ಶ್ರೀ ನಿತಿನ್ ಹೆಚ್.ಪಿ. ರವರು ಬರೆದಿದ್ದಾರೆ. ಶ್ರೀಮತಿ ವಿದ್ಯಾ ಭಾಗೋಡಿ; ಶಾಂತರಾಜ ಮಲ್ಲಸಮುದ್ರ; ಶ್ರೀ ಶಾಂತಿನಾಥ ಹೋತಪೇಟಿ; ಸುರೇಶ ಅರ್ಕಸಾಲಿ, ಹುಬ್ಬಳ್ಳಿ; ಸ್ವಾತಿ ಗ್ರಾಫಿಕ್ಸ್, ಹುಬ್ಬಳ್ಳಿ; ವಿಶ್ವಕಲಾ ಪ್ರಿಂಟರ್ಸ್, ಬೆಂಗಳೂರು; ಚಿತ್ತಾ ಜಿನೇಂದ್ರ, ಬೆಂಗಳೂರು; ಧನ್ನು ಅಣ್ಣಾ ಹೊಸಮನಿ, ಬಸವನಬಾಗೇವಾಡಿ; ಪ್ರವೀಣ್ ಕಾಸಾರ, ಶಹಾ, ವಿಜಯಪುರ; ಧೀರಜ್ ಪಂಡಿತ್, ಸ್ತವನಿಧಿ; ಶ್ರೀ ಸಂತೋಷ್ ಮುರಗಿ ಪಾಟೀಲ; ಶ್ರೀ ವಿಮಲ್ ತಾಳಿಕೋಟಿ ಮತ್ತು ಅಂಚೆ ವಿಭಾಗದ ಸಕಲ ಸಿಬ್ಬಂದಿ – ಶಿವಮೊಗ್ಗ; ಪುತ್ತೂರು ಹಾಗೂ ಮಂಗಳೂರು ಡಿವಿಷನ್ ರವರೆಲ್ಲರ ಪರಿಶ್ರಮ ಈ ಸ್ಮರಣಿಯ ಕಾರ್ಯದಲ್ಲಿದೆ.
– ಜೈನ್ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ