ಉತ್ತಮ ಬ್ರಹ್ಮಚರ್ಯ ಧರ್ಮ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಹತ್ತನೆಯ ಧರ್ಮ.
ಬ್ರಹ್ಮಚರ್ಯವೆಂದರೆ ಸ್ತ್ರೀಸಂಸರ್ಗವನ್ನು ಬಿಡುವುದೆಂದು ಅನೇಕರು ತಿಳಿದಿರುತ್ತಾರೆ ಮತ್ತು ಹೇಳುತ್ತಾರೆ. ಆದರೆ ಬ್ರಹ್ಮಚರ್ಯ ಶಬ್ದಕ್ಕೆ ಇದು ಮುಖ್ಯವಾದ ಅರ್ಥವಲ್ಲ. ಹಾಗಾದರೆ ಸಂಸರ್ಗತ್ಯಾಗಕ್ಕೆ ಬ್ರಹ್ಮಚರ್ಯ ಎಂದು ಹೇಳುವುದು ತಪ್ಪೇ? ಎಂದು ಕೇಳಿದರೆ ಆ ವಿಷಯವನ್ನು ಇದೇ ಲೇಖದಲ್ಲಿ ಮುಂದೆ ಸ್ಪಷ್ಟಪಡಿಸುವವು, ಬ್ರಹ್ಮಚರ್ಯ ಶಬ್ದವು “ಬ್ರಹ್ಮ+ ಚರ್ಯ”ವೆಂಬ ಎರಡು ವ್ಯಸ್ತಪದಗಳಿಂದ ಕೂಡಿದ ಸಮಸ್ಯೆ ಅಥವಾ ಸಮಾಸಪದ. ಈ ಎರಡು ಪದಗಳ ಅರ್ಥವನ್ನು ನಾವು ವಿಚಾರಮಾಡಿದರೆ ಸಮಾಸಪದದ ಅರ್ಥವು ಸುಗಮವಾಗುವುದು.
ಅಮರಸಿಂಹನು “ವೇದಸ್ಸತ್ಯಂ ತಪೋ ಬ್ರಹ್ಮ ಬ್ರಹ್ಮಾ ವಿಪ್ರ ಪ್ರಜಾ ಪತಿ’ ಎಂದು ಹೇಳಿರುವಂತೆ ಬ್ರಹ್ಮ ಶಬ್ದಕ್ಕೆ ಆರು ಅರ್ಥಗಳಿರುತ್ತವೆ. ೧. ವೇದ, ೨. ಸತ್ಯ, ೩, ತಪಸ್ಸು, ೪. ಪರಮಾತ್ಮ ಅಥವಾ ಪರಬ್ರಹ್ಮ, ಸ ಬ್ರಾಹ್ಮಣ, ೬. ಬ್ರಹ್ಮದೇವ, ಚರ್ಯಶಬ್ದಕ್ಕೆ “ಚರ-ಗತಿಭಕ್ಷಣಯೋ” ಎಂದು ಹೇಳಿರುವಂತೆ ಎರಡು ಅರ್ಥಗಳಿರುತ್ತವೆ – ೧ ಗಮನ, ೨. ಭಕ್ಷಣ ಪ್ರಕೃತ ಸಂದರ್ಭದಲ್ಲಿ ಬ್ರಹ್ಮಶಬ್ದದ ಐದನೆಯದಾದ ಬಾಹಣಾರ್ಥವ ಆರನೆಯದಾದ ಬ್ರಹ್ಮದೇವಾರ್ಥವೂ ಚರ್ಯಶಬ್ದದ ಎರಡನೆಯದಾದ ಭಕ್ಷಣಾರ್ಥವೂ ಅನುಪಯೋಗಗಳು, ಇನ್ನು ನಾವು ಬ್ರಹ್ಮಚರ್ಯವೆಂಬ ಸಮಸ್ತಪದದ ಅರ್ಥವನ್ನು ಮಾಡುವುದು ಸುಲಭ.
ಬ್ರಹ್ಮಚರ್ಯವೆಂದರೆ ಬ್ರಹ್ಮದಲ್ಲಿ ಗತಿ-ಗಮನ, ನಿಷ್ಠೆ ಅಥವಾ ಚಿತ್ತೈಕಾಗ್ರತೆಯೆಂದರ್ಥ, ಪ್ರಕೃತ ಸಂದರ್ಭದಲ್ಲಿ ಬ್ರಹ್ಮ ಶಬ್ದಕ್ಕೆ ವೇದ, ಸತ್ಯ, ತಪಸ್ಸು, ಪರಬ್ರಹ್ಮಗಳೆಂಬ ನಾಲ್ಕು ಅರ್ಥಗಳನ್ನು ಪರಿಗ್ರಹಿಸಬಹುದಾದುದ ರಿಂದ ಈ ನಾಲ್ಕರೊಳಗೆ ಯಾವುದರಲ್ಲಿ ಚಿತ್ರಕಾಗ್ರತೆಯನ್ನಿಟ್ಟರೂ ಅದು ಬ್ರಹ್ಮಚರ್ಯವೆನಿಸುವುದು, ಆದರೆ ಈ ನಾಲ್ಕು ಅರ್ಥಗಳನ್ನೂ ಸಂದರ್ಭೋ ಚಿತವಾಗಿ ಉಪಯೋಗಿಸಿಕೊಳ್ಳಬೇಕು. ವೇದಶಾಸ್ತ್ರಾಧ್ಯಯನ ಸಂದರ್ಭದಲ್ಲಿಬ್ರಹ್ಮಚರ್ಯವೆಂದರೆ ಅದರಲ್ಲಿ ಚಿತ್ರಕಾಗ್ರತೆಯೆಂದರ್ಥ. ಪರಮಾತ್ಮಧ್ಯಾನ ಸಂದರ್ಭದಲ್ಲಿ ಬ್ರಹ್ಮಚರ್ಯವೆಂದರೆ ಅದರಲ್ಲಿ ಚಿತ್ತೈಕಾಗ್ರತೆಯೆಂದರ್ಥ. ಹೀಗೆಯೇ ಇತರ ಸಂದರ್ಭಗಳಲ್ಲಿಯೂ ತಿಳಿಯಬೇಕು. ಬ್ರಹ್ಮಚಾರಿಯೆಂದರೆ ಮೇಲ್ಕಂಡ ಆಯಾ ವಿಷಯದಲ್ಲಿ ಚಿತ್ತೈಕಾಗ್ರತೆಯುಳ್ಳವನೆಂದರ್ಥ.
ಗೃಹಸ್ಯ-ಶ್ರಾವಕರು ಪರ್ವತಿಥಿಗಳಲ್ಲಿ ವ್ರತನಿಯಮಗಳನ್ನು ಮಾಡುವಾಗ ಸಾಮಾನ್ಯವಾಗಿ ಬ್ರಹ್ಮಚರ್ಯವನ್ನು ಸ್ವೀಕರಿಸುವ ಪದ್ಧತಿಯಿದೆಯಷ್ಟೆ. ಹಾಗೆಂ ದರೇನು? ಶ್ರಾವಕರಿಗೆ ಆ ವ್ರತನಿಯಮಗಳ ಪಾಲನೆಯೇ ತಪಸ್ಸು, ಅವುಗಳ ಪಾಲನೆಯ ಕಾಲದಲ್ಲಿ ಬ್ರಹ್ಮಚರ್ಯವೆಂದರೆ ಆ ರೂಪವಾದ ತಪಸ್ಸಿನಲ್ಲಿ ಅಂದರೆ ಆ ವ್ರತನಿಯಮಗಳ ಪಾಲನೆಯಲ್ಲಿ ಆಸಕ್ತರಾಗಿರುವುದೆಂದರ್ಥವು. ಅದಕ್ಕೆ ಸಾಧನವಾಗಿ ಶಾಸ್ತ್ರಾಧ್ಯಯನದಲ್ಲಿ ಅಥವಾ ಪರಮಾತ್ಮ ಧ್ಯಾನದಲ್ಲಿ ಆಸಕ್ತರಾದರೆ ಅದೂ ಬ್ರಹ್ಮಚರ್ಯವಾಗುವುದು.
ಮುನಿಗಳು ಬ್ರಹ್ಮಚರ್ಯವನ್ನು ಪಾಲಿಸುವುದೆಂದರೆ ಅವರಿಗೆ ವಿಧಾ ಯಕವಾಗಿರುವ ಉಪವಾಸಾದಿ ಬಾಹ್ಯತವಸ್ಸುಗಳಲ್ಲಿಯೂ ಪ್ರಾಯಶ್ಚಿತ್ತಾದಿ ಅಂತರಂಗತಪಸ್ಸುಗಳಲ್ಲಿಯೂ ಅಥವಾ ಪರಮಾತ್ಮ ಧ್ಯಾನದಲ್ಲಿಯೂ ಆಸಕ್ತ ರಾಗಿರುವುದೆಂದರ್ಥವು.
ಈ ಮೇಲೆ ಹೇಳಲ್ಪಟ್ಟ ಅರ್ಥಗಳೇ ಬ್ರಹ್ಮಚರ್ಯ ಶಬ್ದಕ್ಕೆ ಮುಖ್ಯ ವಾದ ಅರ್ಥಗಳು. ಸ್ತ್ರೀಸಂಸರ್ಗತ್ಯಾಗವು ಗೌಣವಾದ ಅಂದರೆ ಔಪಚಾರಿಕ ವಾದ ಅರ್ಥ. ಹೇಗೆಂದರೆ ಮೇಲ್ಕಂಡ ವೇದ-ಶಾಸ್ತ್ರಾಧ್ಯಾಯನ ಮೊದ ಲಾದುವುಗಳಲ್ಲಿ ಚಿತ್ತೈಕಾಗ್ರತಾರೂಪವಾದ ಬ್ರಹ್ಮಚರ್ಯದ ಪಾಲನೆಯಾಗ ಬೇಕಾದರೆ ಅದನ್ನು ನಾಶಮಾಡುವ ಕಾರಣಗಳನ್ನು ದೂರಮಾಡಬೇಕಾಗು ವುದು, ಬ್ರಹ್ಮಚರ್ಯವನ್ನು ನಾಶಮಾಡುವ ಅಂತಹ ಕಾರಣಗಳಲ್ಲಿ ಸ್ತ್ರೀ ಸಂಸರ್ಗವು ಮುಖ್ಯವಾದುದು. ಇದರ ತ್ಯಾಗದ ನಿಯಮವಿಲ್ಲದಿದ್ದರೆ ಚಿತ್ರ ಚಾಂಚಲ್ಯವುಂಟಾಗುವುದು. ಅದರಿಂದ ಶಾಸ್ತ್ರಾಧ್ಯಯನ ತಪಸ್ಸು ಮೊದಲಾದು ವುಗಳಲ್ಲಿ ಚಿತ್ತೈಕಾಗ್ರತಾರೂಪವಾದ ಬ್ರಹ್ಮಚರ್ಯವು ಹಾಳಾಗುವುದು. ಸ್ತ್ರೀಸಂಸರ್ಗತ್ಯಾಗದ ನಿಯಮವಿದ್ದರೆ ಚಿತ್ತಚಾಂಚಲ್ಯವಾಗದೆ ಆ ಶಾಸ್ತ್ರಾಧ್ಯಯನಾದಿಗಳಲ್ಲಿ ಚಿತ್ತೈಕಾಗ್ರತೆಯುಂಟಾಗುವುದು. ಅದೇ ನಿಜವಾದ ಬ್ರಹ್ಮಚರ್ಯ. ಈಗ ನೋಡಿ-ಮನೋವಾಕ್ಕಾಯಗಳಿಂದ ಸ್ತ್ರೀಸಂಸರ್ಗತ್ಯಾಗವನ್ನು ಮಾಡಿದರೆ ಯಥಾರ್ಥವಾದ ಬ್ರಹ್ಮಚರ್ಯವುಂಟಾಗುವುದೆಂದೂ ಈ ಬ್ರಹ್ಮಚರ್ಯರೂಪವಾದ ಕಾರ್ಯದ ಉತ್ಪತ್ತಿಗೆ ಸ್ತ್ರೀಸಂಸರ್ಗತ್ಯಾಗವು ಮುಖ್ಯ ಕಾರಣವೆಂದೂ ಹೇಳಿದಂತಾಯ್ತು. ಇಲ್ಲಿ. “ಕಾರಣೆ ಕಾರ್ಯ ಪಚಾರ” ಎಂಬ ನ್ಯಾಯನುಸಾರವಾಗಿ ಸ್ತ್ರೀಸಂಸರ್ಗ ತ್ಯಾಗರೂಪವಾದ ಕಾರಣದಲ್ಲಿ ಬ್ರಹ್ಮಚರ್ಯರೂಪವಾದ ಕಾರ್ಯವನ್ನು ಉಪಚರಿಸಿ ಅಥವಾ ಆರೋಪಿಸಿ, ಸ್ತ್ರೀಸಂಸರ್ಗತ್ಯಾಗವು ಬ್ರಹ್ಮಚರ್ಯವೆಂದು ಹೇಳಲ್ಪಟ್ಟಿರುವುದು, ಇದಕ್ಕೊಂದು ಉದಾಹರಣೆ-ಲೋಕದಲ್ಲಿ “ಅನ್ನವೇ ಪ್ರಾಣ”ವೆಂದು ಹೇಳುವ ವಾಡಿಕೆಯಿದೆಯಷ್ಟೆ? ಇಲ್ಲಿ ಅನ್ನವು ಜಡವಸ್ತು: ಭಾವಾಪ್ರಾಣವು ಚೈತನ್ಯವಸ್ತು. ಅಂದ ಮೇಲೆ ಜಡವಸ್ತುವಾದ ಅನ್ನವು ಚೈತನ್ಯಪ್ರಾಣವಾಗುವುದು ಹೇಗೆ? ಎಂದು ಪ್ರಶ್ನೆಯುಂಟಾಗುವುದು. ಇದಕ್ಕೆ ಸಮಾಧಾನವೇನೆಂದರೆ, ಅನ್ನವು ಪ್ರಾಣಧಾರಣೆಗೆ ಕಾರಣ, ಪ್ರಾಣಧಾರಣವು ಕಾರ್ಯ, ಆದುದರಿಂದ ಮೇಲೆ ಹೇಳಿದಂತೆ ಪ್ರಾಣಧಾರಣ ರೂಪವಾದ ಕಾರ್ಯವನ್ನು ಅದಕ್ಕೆ ಕಾರಣವಾದ ಅನ್ನದಲ್ಲಿ ಉಪಚರಿಸಿ ಅಥವಾ ಆರೋಪಿಸಿ ಅನ್ನವೇ ಪ್ರಾಣವೆಂದು ಹೇಳುವ ರೂಢಿಯು ಬಂದಿದೆ. ಇದರಂತೆ ಬ್ರಹ್ಮಚರ್ಯ ವಿಷಯವನ್ನೂ ತಿಳಿಯಬೇಕು.
ತಪಸ್ಸು ಧ್ಯಾನ ಮೊದಲಾದುವುಗಳಿಗೆ ಸ್ತ್ರೀಸಂಸರ್ಗೇಚ್ಛೆಯು ಪ್ರಬಲ ವಾದ ವಿಘಾತಕಾರಿಯಾಗಿರುವುದರಿಂದ ಅದನ್ನು ತ್ಯಜಿಸುವುದು ಬ್ರಹ್ಮಚರ್ಯ ವೆಂದು ಋಷಿಗಳು ಒತ್ತಿ ಹೇಳಿರುತ್ತಾರೆ. ಅದರಂತೆ ರೂಢಿಯಲ್ಲಿಯೂ ಸ್ತ್ರೀ ಸಂಸರ್ಗತ್ಯಾಗವೇ ಬ್ರಹ್ಮಚರ್ಯವೆಂದು ವ್ಯವಹರಿಸಲ್ಪಡುತ್ತಿದೆ. ಇದರಿಂದ ಸ್ಪರ್ಶನೇಂದ್ರಿಯನಿಗ್ರಹವು ಬಹುಕಷ್ಟಸಾಧ್ಯವೆಂದೂ ಅದರ ನಿಗ್ರಹಕ್ಕೆ ಹೆಚ್ಚಿನ ಆತ್ಮಬಲವು ಬೇಕೆಂದೂ, ತಪಸ್ವಿಗಳ ತಪಸ್ಸಿದ್ಧಿಗೆ ಈ ಇಂದ್ರಿಯನಿಗ್ರಹವು ತಳಹದಿಯಾಗಿರುವುದೆಂದೂ ಬ್ರಹ್ಮಚರ್ಯವು ಬಹು ಪವಿತ್ರವಾದ ಧರ್ಮವೆಂದೂ ಗೊತ್ತಾಗುವುದು.
ಬ್ರಹ್ಮಚರ್ಯಶಬ್ದಕ್ಕೆ ಉತ್ತಮವೆಂಬ ವಿಶೇಷಣವನ್ನು ಸೇರಿಸಿರುವುದ ರಿಂದ ಪೂರ್ವಾನುಭೂತಸ್ವೀಯ ಸ್ಮರಣ, ಸ್ತ್ರೀಕಥಾಶ್ರವಣ ಇವುಗಳನ್ನೂ ಸ್ತ್ರೀ ಸಂಬಂಧವಾದ ಶಯನ ಆಸನ ಮೊದ ಲಾದುವುಗಳನ್ನೂ ತ್ಯಜಿಸಿ ಮ ವಾಕ್ಕಾಯಗಳಿಂದ ನಿರತಿಚಾರವಾಗಿ ಬ್ರಹ್ಮಚರ್ಯವ್ರತವನ್ನು ಪಾಲಿಸ ಬೇಕೆಂದು ಸೂಚಿತವಾಗಿರುವುದು. ಇಂತಹ ಉತ್ತಮ ಬ್ರಹ್ಮಚರ್ಯಧರ್ಮವ ಜಿತೇಂದ್ರಿಯರಾದ ಮಹಾಮುನಿಗಳಿಗೆ ಸಾಧ್ಯವಾದುದು. ಅಂತಹ ಪವಿತ್ರ ಧರ್ಮವನ್ನು ಪೂರ್ಣರೂಪದಿಂದ ಪರಿಪಾಲಿಸುವ ಶಕ್ತಿಯು ತಮ್ಮಲ್ಲಿ ಉಂಟಾಗಬೇಕೆಂಬ ಭಾವನೆಯಿಂದ ಶ್ರಾವಕರು ಅದನ್ನು ಭಾದ್ರಪದಮಾಸ ದಲ್ಲಿ ವಿಶೇಷರೂಪದಿಂದ ಪೂಜಿಸುತ್ತ ಬಂದಿರುವುದು ಪರಂಪರೆಯಾದ ಶಿಷ್ಟಪದ್ಧತಿಯಾಗಿದೆ.