ಉತ್ತಮ ಆರ್ಜವ ಧರ್ಮ ಅಥವಾ ಸರಳತ್ವ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಮೂರನೇ ಧರ್ಮ.
ನೀತಿಕಾರರು “ಮನಸ್ಯನ್ಯದ್ವಚಸ್ಯತ್ಕರ್ಮಣನ್ಯದ್ಧಿ ಪಾಪಿನಾಂ” ಎಂದು ಹೇಳಿರುವಂತೆ ಮನಸ್ಸಿನಲ್ಲೊಂದು, ಮಾತಿನಲ್ಲೊಂದು, ಕಾರ್ಯದಲ್ಲೊಂದು ಅಂದರೆ ಮನಸ್ಸಿನಲ್ಲಿ ಯೋಚಿಸುವುದು ಬೇರೆ, ಮಾತಿನಲ್ಲಿ ನುಡಿಯುವುದು ಬೇರೆ, ಕಾರ್ಯದಲ್ಲಿ ಆಚರಣೆಯು ಬೇರೆ ಆಗಿರುವ ಭಾವಕ್ಕೆ ಮಾಯೆಯೆಂದೂ ಕುಟಿಲತೆಯೆಂದೂ ವಕ್ರತೆಯೆಂದೂ ವಂಚನೆಯೆಂದೂ ಹೆಸರು.
ಚಾರಿತ್ರಮೋಹನೀಯವೆಂಬ ಕರ್ಮದ ಉದಯದಿಂದ ಮಾಯಾ ಪರಿಣಾಮವು ಆವಿರ್ಭವಿಸುವುದು, ಆ ಕರ್ಮೋದಯದ ನ್ಯೂನಾಧಿಕ್ಯದಿಂದ ಪ್ರಾಣಿಗಳಲ್ಲಿ ಮಾಯಾಪರಿಣಾಮವೂ ನ್ಯೂನಾಧಿಕಭಾವದಿಂದ ಉಂಟಾಗು ವುದು. ಆ ನ್ಯೂನಾಧಿಕಭಾವಗಳಿಗೆ ಹಿಂದಿನ ಲೇಖಗಳಲ್ಲಿ ಹೇಳಿರುವಂತೆ, ಅನಂತಾನುಬರಿಧಿ ಮಾಯಾ, ಅಪ್ರತ್ಯಾಖ್ಯಾನಮಾಯಾ, ಪ್ರತ್ಯಾಖ್ಯಾನ ಮಾಯಾ, ಸಂಜ್ವಲನ ಮಾಯಾ ಎಂದು ಹೆಸರು. ಈ ನಾಲ್ಕು ಪ್ರಕಾರವಾದ ಮಾಯಾಪರಿಣಾಮಗಳ ವಕ್ರತೆಯು ಗೋಮಟಸಾರ ಜೀವಕಾಂಡದ ಈ ಕೆಳಗಿನ ಗಾಥೆಯಲ್ಲಿ ಹೇಳುವಂತೆ ನಾಲ್ಕು ಪ್ರಕಾರವಾಗಿರುತ್ತದೆ.
ವೇಣುದಮೂಲೋರಬ್ಬಯಸಿಂಗೇ ಗೋಮುತ್ತವಿಯ ಬೋರಪ್ಪ 1 ಸರಸೀ ಮಾಯಾ ಾರಯ ಹಿರಿಯಣರಾಮರಗಸು ಭವದಿ ಜಿಯಂ ।
ಭಾವಾರ್ಥ~ ಅನಂತಾನುಬಂಧಿಮಾಯೆಯ ವಕ್ರತೆಯು ಬಿದಿರಿನ ಬುಡ ದಂತೆಯೂ ಅಪ್ರತ್ಯಾಖ್ಯಾನಮಾಯೆಯ ವಕ್ರತೆಯು ಕುರಿಯ ಕೊಂಬಿನಂತೆ ಯೂ ಪ್ರತ್ಯಾಖ್ಯಾನಮಾಯೆಯ ವಕ್ರತೆಯು ಗೋಮೂತ್ರದಂತೆಯೂ ಸಂ ಜ್ವಲನವಾಯೆಯ ವಕ್ರತೆಯು ಗುದ್ದಲಿಯಂತೆಯೂ ಇರುವುವು. ಅನಂ ತಾನುಬ೦ಧಿಮಾಯೆಯು ನರಕಗತಿಗೂ ಅಪ್ರತ್ಯಾಖ್ಯಾನಮಾಯೆಯು ತಿರ್ಯ ಗತಿಗೂ ಪ್ರತ್ಯಾಖ್ಯಾನಮಾಯೆಯು ಮನುಷ್ಯಗತಿಗೂ ಸಂಜ್ವಲನಮಾಯೆಯು ದೇವಗತಿಗೂ ಅಂದರೆ ಈ ಗತಿಗಳಲ್ಲಿ ಹುಟ್ಟುವುದಕ್ಕೆ ಕಾರಣಗಳಾಗುತ್ತವೆ.
ಅನಂತಾನುಬಂಧಿ “ಅಪ್ರತ್ಯಾಖ್ಯಾನ, ಪ್ರತ್ಯಾಖ್ಯಾನ, ಸಂಜ್ವಲನಕ್ರೋಧ ಮಾಯಾ ಲೋಭಗಳು ಯಥಾಕ್ರಮವಾಗಿ ನರಕಾರ್ಯಹ್ಮರ್ತ್ಯ ದೇವಗತಿಗಳಲ್ಲಿ ಹುಟ್ಟುವುದಕ್ಕೆ ಕಾರಣಗಳಾಗಿರುತ್ತವೆಂದು ಹೇಳಿರುವುದು ಸಾಮಾನ್ಯ ಕಥನ, ವಿಶೇಷರೂಪದಿಂದ ಮಾಯೆಯ ವಿಷಯದಲ್ಲಿ ಪ್ರತ್ಯೇಕ ವಾಗಿ ಮಹರ್ಷಿಗಳು “ಮಾಯಾ ಕೈರ್ಯನಸ್ಯ” ಎಂದು ಹೇಳಿರುತ್ತಾರೆ. ವಂಚಕತ್ವವು ತಿರ್ಯಗತಿಯಲ್ಲಿ ಹುಟ್ಟುವುದಕ್ಕೆ ಕಾರಣವೆಂದು ಈ ಸೂತ್ರದ
ಚಾರಿತ್ರಮೋಹನೀಯ ಕರ್ಮದ ಭೇದವಾದ ಈ ಮಾಯಾಕಷಾಯ ಕರ್ಮದ ಪ್ರೇರಣೆಯಿಂದಲೇ ಜೀವಾತ್ಮನು ಪರವಂಚನೆ ಕಾರ್ಯಗಳಲ್ಲಿ ಪ್ರವೃತ್ತನಾಗುವನು ಅಂದರೆ ಈ ಪರವಂಚನೆ ಮೊದಲಾದ ಬಾಹ್ಯಕಾರ್ಯಗಳಿಗೆ ಅಭ್ಯಂತರಿಕವಾದ ಮಾಯಾಕರ್ಮವು ಕಾರಣವಾಗಿರು
ಮೇಲೆ ಹೇಳಿದಂತೆ ಮಾಯಾಚಾರಿಯಾದ ಜೀವಾತ್ಮನಿಗೆ ಉತ್ತಮ ಜನ್ಮದಲ್ಲಿ ದುರ್ಗತಿಯಾಗುವುದಲ್ಲದೆ ಇಹಜನ್ಮದಲ್ಲಿಯೂ ನಾನಾ ವಿಪತ್ತು ಗಳುಂಟಾಗುತ್ತವೆಂದೂ ಮಾಯಾವಿಯು ಲೋಕದ ವಿಶ್ವಾಸಕ್ಕೆ ಪಾತ್ರನಾಗು ವುದಿಲ್ಲವೆಂದೂ ಭಾವಿಸಿ,“ಯೋಗಸ್ವಾವಕ್ರತಾರ್ಜವಂ”
ಎಂದು ರಾಜವಾರ್ತಿಕದಲ್ಲಿ ಹೇಳಿರುವಂತೆ ಮನೋವಾಕ್ಕಾಯಗಳಲ್ಲಿ ಕುಟಿ ಲತೆ-ವಕ್ರತೆಯಿಲ್ಲದೆ ಸರಳವಾಗಿರುವ ಭಾವಕ್ಕೆ ಅಂದರೆ “ಮನಸ್ಸೇಕ ವಚ ಸೈಕಂ ಕರ್ಮಕ ಮಹಾತ್ಮನಾ” ಎಂದು ಹೇಳಿರುವಂತೆ ಮನಸ್ಸಿನಲ್ಲಿ ಯೂ ವಚನದಲ್ಲಿಯೂ ಕೃತಿಯಲ್ಲಿಯೂ ಒಂದೇ ವಿಧವಾಗಿ ಸರಳವಾಗಿರುವ ಭಾವಕ್ಕೆ ಆರ್ಜವವೆಂದೂ ಎಂತಹ ಸಂದರ್ಭದಲ್ಲಿಯೂ ಸರಳವಾಗಿರುವ ಭಾವಕ್ಕೆ ಉತ್ತಮ ಆರ್ಜವವೆಂದೂ ಹೆಸರು, ದಶಲಕ್ಷಣಧರ್ಮಗಳಲ್ಲಿ ಇದು ಮೂರನೆಯ ಧರ್ಮ. ಹಿಂದೆ ಹೇಳಿದಂತೆ ಇದೂ ಯತಿಗಳಿಗೆ ವಿಧಾಯಕ ವಾದ ಧರ್ಮವಾಗಿರುವುದಾದರೂ ಶ್ರಾವಕರು ತಮ್ಮಲ್ಲಿ ಆ ಪವಿತ್ರಧರ್ಮವು ಪ್ರಾದುರ್ಭವಿಸಬೇಕೆಂಬ ಪವಿತ್ರೋದ್ದೇಶದಿಂದ ಈ ಧರ್ಮವನ್ನು ಭಕ್ತಿಭಾವ ದಿಂದ ಪೂಜಿಸುವುದಾಗಿದೆ.