ಹಾಸನ, ಕರ್ನಾಟಕ, 12 ಮಾರ್ಚ 2021: ಹಾಸನ ಜಿಲ್ಲೆಯ ಜೈನರ ಗುತ್ತಿಯಲ್ಲಿ ಪುರಾತನವಾದ 6 ದಿಗಂಬರ ಜೈನ ವಿಗ್ರಹಗಳು ಇಂದು ಪತ್ತೆಯಾಗಿವೆ. ಈ ವಿಗ್ರಹಗಳನ್ನು ಮುನಿ 108 ಶ್ರೀ ವೀರಸಾಗರ ಮಹಾರಾಜರ ಮಾರ್ಗದರ್ಶನದಲ್ಲಿ ಹೊರತೆಗೆಯಲಾಯಿತು. ಇಲ್ಲಿ ದೊರೆತ 6 ವಿಗ್ರಹಗಳಲ್ಲಿ 4 ತೀರ್ಥಂಕರರ ವಿಗ್ರಹಗಳಾಗಿದ್ದು ಇನ್ನೆರಡು ಯಕ್ಷಿಯರ ವಿಗ್ರಹ ಗಳಾಗಿವೆ.
ದೊರೆತ ವಿಗ್ರಹಗಳ ವಿವರ:
1. ಮುನಿಸುವ್ರತ ತೀರ್ಥಂಕರರು – ಪದ್ಮಾಸನಯುಕ್ತ ಕಪ್ಪುಶಿಲೆಯ ವಿಗ್ರಹ – 21 ಇಂಚುಗಳು.
2. ಆದಿನಾಥ ತೀರ್ಥಂಕರರು – ಅಮೃತ ಶಿಲೆ ಪದ್ಮಾಸನಯುಕ್ತ 9 ಇಂಚು ಎತ್ತರದ ಆದಿನಾಥ ತೀರ್ಥಂಕರರ 2 ವಿಗ್ರಹಗಳು, ಇದರಲ್ಲಿ ಒಂದು ಬಿನ್ನವಾಗಿದೆ.
3. ಪಾರ್ಶ್ವನಾಥ ತೀರ್ಥಂಕರರು – ಕಪ್ಪು ಶಿಲೆ ಪದ್ಮಾಸನಯುಕ್ತ 11 ಇಂಚು ಎತ್ತರದ ವಿಗ್ರಹ.
4. ಯಕ್ಷಿ ಪದ್ಮಾವತಿ ಅಮ್ಮನವರು – . ಸುಮಾರು 9 ಇಂಚು ಎತ್ತರದ ಕಪ್ಪು ಶಿಲೆ ಹಾಗೂ ಸುಮಾರು 3 ಇಂಚು ಎತ್ತರದ ಪಂಚಲೋಹದ ವಿಗ್ರಹಗಳು.
ಜೈನರ ಗುತ್ತಿಯು ಜಿಲ್ಲಾ ಕೇಂದ್ರ ಹಾಸನದಿಂದ ಸುಮಾರು 26 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರಿನ ಪ್ರತಿಷ್ಠಾಚಾರ್ಯ ಪಂಡಿತ್ ಪ್ರವೀಣ್ ಜೈನ ರವರು ಶ್ರೀ ವೀರಸಾಗರ ಮಹಾರಾಜರ ಜೊತೆಯಲ್ಲಿದ್ದು ವಿಗ್ರಹಗಳು ದೊರೆತ ನಂತರ ಅವುಗಳನ್ನು ಸ್ವಚ್ಛ ಗೊಳಿಸಿ ಅಭಿಷೇಕವನ್ನು ನೆರವೇರಿಸಿದರು.
– ಚಿತ್ರಗಳು, ವೀಡಿಯೋ ಹಾಗೂ ಮಾಹಿತಿ: ಶ್ರೀ ಜಿನೇಶ್ ಜೈನ್, ಹಾಸನ ಹಾಗೂ ಜೈನ್ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ.