Skip to content
Home » ಕನ್ನಡ » ಸುದ್ದಿ-ಸಮಾಚಾರ » ನಿತಿನ್ ಹೆಚ್.ಪಿ. ಯವರ ಜೈನ ಪರಂಪರೆ ಪಯಣವನ್ನು ಗುರುತಿಸಿದ ವಿಪ್ರೋ ಸಂಸ್ಥೆ

ನಿತಿನ್ ಹೆಚ್.ಪಿ. ಯವರ ಜೈನ ಪರಂಪರೆ ಪಯಣವನ್ನು ಗುರುತಿಸಿದ ವಿಪ್ರೋ ಸಂಸ್ಥೆ

    ಬೆಂಗಳೂರು, ಜೂನ್ 16, 2022: ಭಾರತದ 3ನೇ ಅತಿದೊಡ್ಡ ಮಾಹಿತಿ ಮಾಹಿತಿ ತಂತ್ರಜ್ಞಾನ ಸಂಸ್ಥೆ ವಿಪ್ರೋ “Ambitions Realized – ಮಹತ್ವಾಕಾಂಕ್ಷೆಗಳು ಸಾಕಾರಗೊಂಡಾಗ” ಎಂಬ Brand Campaign – ಬ್ರ್ಯಾಂಡ್ ಕ್ಯಾಂಪೇನ್ ಕಳೆದ ಜೂನ್ ೧೬ ರಂದು ಆರ‍ಂಭಿಸಿತು. ಇದು ಕಳೆದ ಐದು ವರ್ಷಗಳಲ್ಲೇ ವಿಪ್ರೋದ ಅತ್ಯಂತ ದೊಡ್ಡ ಬ್ರ್ಯಾಂಡ್ ಕ್ಯಾಂಪೇನ್. ಈ ಕ್ಯಾಂಪೇನ್ ವಿಪ್ರೋ ತನ್ನ ಗ್ರಾಹಕರು ಹಾಗೂ ಸಮುದಾಯಗಳು ತಮ್ಮ ಉದೇಶ ಹಾಗೂ ಮಹತ್ವಾಕಾಂಕ್ಷೆಗಳನ್ನು ಸಾಕಾರಗೊಳಿಸಿಕೊಳ್ಳಲು ಹೇಗೆ ಸಕಾರಾತ್ಮಕವಾಗಿ ಪ್ರಭಾವ ಬೀರುತ್ತದೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
    ಈ ಕ್ಯಾಂಪೇನ್ ನ ಅಂಗವಾಗಿ ವಿಪ್ರೋ ಸಂಸ್ಥೆಯು ತಮ್ಮ ಸಂಸ್ಥೆಯ ಉದ್ಯೋಗಿಗಳು ಹೇಗೆ ಮಹತ್ವಾಕಾಂಕ್ಷೆಗಳನ್ನು ಸಾಕಾರಗೊಳಿಸಿಕೊಳ್ಳುತಿದ್ದಾರೆ ಎಂಬುದನ್ನು ಎತ್ತಿತೋರಲು ತನ್ನ ಮೂರು ಉದ್ಯೋಗಿಗಳ ಸಾಧನೆಯ ಕುರಿತ ಕಿರುಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ಧು, ವಿಪ್ರೋ ಬೆಂಗಳೂರಿನಲ್ಲಿ ಮಾರ್ಕೆಟಿಂಗ್ ಟೆಕ್ನಾಲಜಿ ಸ್ಪೆಶಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ (www.jainheritagecentres.com) ವೆಬ್ಸೈಟ್ ನ ಸಂಸ್ಥಾಪಕರಾದ ಶ್ರ‍ೀ ನಿತಿನ್ ಹೆಚ್.ಪಿ. ಯವರ ಎರಡು ದಶಕಗಳ ಜೈನ ಪರಂಪರೆ ಪಯಣವನ್ನು ಗುರುತಿಸಿ ಚಿತ್ರಿಸಿದೆ. 66 ದೇಶಗಳಲ್ಲಿ ಕಛೇರಿಗಳನ್ನು ಹೊಂದಿರುವ ವಿಪ್ರೋದ ಎರಡೂವರೆ ಲಕ್ಷ ಉದ್ಯೋಗಿಗಳಲ್ಲಿ ನಿತಿನ್ ರವರು ಈ ಗೌರವಕ್ಕೆ ಪಾತ್ರಾರಾಗಿರುವ ಏಕೈಕ ಭಾರತೀಯ, ಏಕೈಕ ಕನ್ನಡಿಗ ಹಾಗೂ ಏಕೈಕ ಜೈನರು ಎಂಬುದು ಹೆಮ್ಮೆಯ ವಿಷಯ.

    ನಿತಿನ್ ಹೆಚ್.ಪಿ. ಯವರ ಜೈನ ಪರಂಪರೆ ಪಯಣವನ್ನು ಗುರುತಿಸಿದ ವಿಪ್ರೋ ಸಂಸ್ಥೆ
    ನಿತಿನ್ ಹೆಚ್.ಪಿ. ಯವರ ಜೈನ ಪರಂಪರೆ ಪಯಣವನ್ನು ಗುರುತಿಸಿದ ವಿಪ್ರೋ ಸಂಸ್ಥೆ

    ಹಾಸನದ ದೊಡ್ಡಬಸದಿ, ಶ್ರ‍ವಣಬೆಳಗೊಳದ ದೊಡ್ಡ ಬೆಟ್ಟ, ಹಳೇಬೆಳಗೊಳದ ಜೈನ ಬಸದಿ ಹಾಗೂ ಅಲ್ಲಿನ ಶಾಸನಗಳನ್ನು ಚಿತ್ರಿಸುತ್ತ ನಿತಿನ್ ರವರ ಜೈನ ಪರಂಪರೆ ಪಯಣವನ್ನು ಅತ್ಯಂತ ಮನೋಗ್ನವಾಗಿ ಚಿತ್ರಿಸಲಾಗಿದೆ. ಉನ್ನತ ಮಟ್ಟದ ಛಾಯಾಗ್ರಹಣ ಹಾಗೂ ಸಂಕಲನದೊಂದಿಗೆ ಮೂಡಿಬಂದಿರುವ ಈ ಸಾಕ್ಷ್ಯಚಿತ್ರವು ಜೈನಧರ್ಮದ ಶ್ರ‍ೀಮಂತ ಪರಪರೆಯನ್ನು ಎತ್ತಿತೋರುತ್ತದೆ. ಜೈನಧರ್ಮಕ್ಕೆ ಸಂಬಂಧಿಸಿದಂತೆ ಕಾರ್ಪೋರ‍ೇಟ್ ಸಂಸ್ಥೆಯೊಂದು ನಿರ್ಮಿಸಿದ ಮೊಟ್ಟಮೊದಲ ಸಾಕ್ಷ್ಯಚಿತ್ರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

    YouTube player
    Nitin Parshwanath: My Ambition | ನಿತಿನ್ ಪಾರ್ಶ್ವನಾಥ್: ನನ್ನ ಮಹತ್ವಾಕಾಂಕ್ಷೆ


    20 ವರ್ಷಗಳ ಹಿಂದೆ ನಾಡು – ನುಡಿ ಹಾಗೂ ಧರ್ಮದ ಮೇಲಿನ ಅಭಿಮಾನದಿಂದ ನಾನು ಆರಂಭಿಸಿದ ಕಾರ್ಯ ಈ ಮಟ್ಟಕ್ಕೆ ಬೆಳೆಯುತ್ತದೆಂದು ಎಂದೂ ಎಣಿಸಿರಲಿಲ್ಲ. ನಾನು ಕಾರ್ಯನಿರ್ವಹಿಸುವ ಸಂಸ್ಥೆಯ ಬ್ರ್ಯಾಂಡ್ ಕ್ಯಾಂಪೇನ್ ನ ಭಾಗವಾಗಿ ನನ್ನ ಕಾರ್ಯವನ್ನು ಎತ್ತಿ ತೋರಿರುವುದು ಸಂತಸ ತಂದಿದೆ, ಇದಕ್ಕಿಂತ ದೊಡ್ಡ ಪ್ರಶಸ್ತಿ ಇನ್ನೇನು ಬೇಕು. ನಮ್ಮ ವೆಬ್ಸೈಟ್ ನ ದ್ವಿದಶಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಈ ಸಾಕ್ಷ್ಯಚಿತ್ರ ಬಿಡುಗಡೆಯಾಗಿರುವುದು ಸಂತಸವನ್ನು ಇಮ್ಮಡಿ ಗೊಳಿಸಿದೆ. ನನ್ನ ಈ ಪಯಣದಲ್ಲಿ ಬೆನ್ನೆಲುಬಾಗಿ ನಿಂತಿರುವ ತಂದೆ – ತಾಯಿ, ಮಡದಿ, ಗುರು – ಹಿರಿಯರು, ಸಹೋದ್ಯೋಗಿಗಳು. ಸ್ನೇಹಿತರು ಹಾಗೂ ಹಿತೈಷಿಗಳಿಗೆ ಇದರ ಶ್ರ‍ೇಯ ಸಲ್ಲುತ್ತದೆ ಎಂದು ನಿತಿನ್ ಹೇಳಿದ್ದಾರೆ.
    ಈ ಸಾಕ್ಷ್ಯಚಿತ್ರವು ಮುಂಬರುವ ದಿನಗಳಲ್ಲಿ ಕಾರ್ಪೋರ‍ೇಟ್ ಸಂಸ್ಥೆಗಳು ಜೈನಧರ್ಮದ ಶೈಕ್ಷಣಿಕ ಹಾಗೂ ಪರಂಪರೆ ಸಂರಕ್ಷಣೆ, ಸಂಶೋಧನೆಗೆ ಸಂಬಂಧಿಸಿದ ಯೋಜನೆಗಳು ಹಾಗೂ ಕಾರ್ಯಚಟುವಟಿಕೆಗಳನ್ನು ಪ್ರಾಯೋಜಿಸಲು ಪ್ರೇರಣೆ ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
    ಸಾಕ್ಷ್ಯಚಿತ್ರವನನ್ನು ಈ ಲಿಂಕ್ ನಲ್ಲಿ ವೀಕ್ಷಿಸಬಹುದು – https://youtu.be/bf9vlkONj78

    error: Jain Heritage Centres - Celebrating Jain Heritage.....Globally!