ಸ್ಥಳ – ಪಾರ್ಶ್ವನಾಥ ಬಸದಿಯ ಮುಂಭಾಗ, ಬಸ್ತಿಹಳ್ಳಿ (ಹಳೇಬೀಡು), ಬೇಲೂರು ತಾಲೂಕು. ಹಾಸನ ಜಿಲ್ಲೆ.
ಶಾಸನದ ಸ್ವರೂಪ – ನಿಶದಿ – ಸಲ್ಲೇಖನ ಸ್ಮಾರಕ, ಕಂಬ ನಿಶದಿಗೆ ಅತ್ಯುತ್ತಮ ಉದಾಹರಣೆ
ಗುರು ಪರಂಪರೆ – ಕುಂದಕುಂದಾನ್ವಯ
ಶಾಸನದ ಭಾಷೆ – ಹಳೆಗನ್ನಡ, ಕಲ್ಲಿನ ಮೂರು ಮುಖಗಳಲ್ಲಿ ಶಾಸನವನ್ನು ಕೆತ್ತಲಾಗಿದೆ.
ಶಾಸನದಲ್ಲಿ ಉಲ್ಲೇಖಿಸಲಾಗಿರುವ ಸಮಾಧಿಹೊಂದಿದ ವ್ಯಕ್ತಿ – ಮುನಿ ಮೋನಿ ಭಟಾರ.
ಶಾಸನದ ವಿಷಯ
+16 ಸಾಲುಗಳಿರುವ ಶಾಸನದ ಮೊದಲ ಮುಖ – ಗಂಗ ದೊರೆ ಇಮ್ಮಡಿ ಬೂತುಗನು ಆಳುತ್ತಿದ್ದಾಗ ಕೊಂಡಕುಂದಾನ್ವಯದ ಗುಣಸಾಗರ ಭಟಾರರ ಶಿಷ್ಯರಾದ, ಗುಣಚಂದ್ರ ಭಟಾರರು, ಅವರ ಶಿಷ್ಯರಾದ ಮೋನಿಭಟಾರರಿಗೆ, ಅಭಯ ನನ್ದಿ ಪಂಡಿತರ ಶಿಷ್ಯರಾದ ಕಿರಿಯ ಮೋನಿ ಭಟಾರರು ಪರೋಕ್ಷವಿನಯ ಮಾಡಿ ಈ ನಿಸಿದಿಗೆಯನ್ನು ನಿಲ್ಲಿಸಿದರು. ಈ ಶಾಸನವನ್ನು ಶ್ರೀಧರಯ್ಯ ಎಂಬುವವನು ಬರೆದನು.
+ 11 ಸಾಲುಗಳಿರುವ ಶಾಸನದ ಎರಡನೇ ಮುಖ – ಕಂದ ಪದ್ಯದಲ್ಲಿದೆ. ಲೋಭಿಗಳನ್ನು ಹೊಗಳಬೇಡ, ಹೊಗಳುವೆಯಾದರೆ, ಅಭಿಮಾನಿಯೂ, ಗುಣಗಳ ಕಣಿಯೂ ಶ್ರೇಷ್ಠದಾನಿಯೂ ಅಕಳಂಕರೂ ಆದ ಮೋನಿಭಟಾರಕರನ್ನು ಹೊಗಳು ಎಂದು ಬಣ್ಣಿಸಿದೆ.+
+ 18 ಸಾಲುಗಳಿರುವ ಶಾಸನದ ಮೂರನೇ ಮುಖ – ಉತ್ಪಲ ಮಾಲಾ ವೃತ್ತಲ್ಲಿದೆ. ಮೋನಿ ಭಟಾರಕರ ಸಾಹಸವನ್ನು ಬಣ್ಣಿಸುತ್ತಾ – ಮಹಾ ಶಕ್ತಿಶಾಲಿಯೂ ಗರ್ವಿಷ್ಟನೂ ಆದ ಬಲ್ಲಪನು ಕೆಲ್ಲಂಗೆರೆಗೆ ಹೋಗಿ ತಾನಿದನ್ನು ಕೊಂಡೆ ಎಂದು ಆಕ್ರಮಿಸಲು ಯತ್ನಿಸಿದಾಗ, ಮುನಿಯುಅವನನ್ನು ನಯವಾಗಿ ಒಳ್ಳೇ ಮಾತಿನಿಂದಲೇ ಮೆಚ್ಚಿಸಿ, ಕೆಲ್ಲಂಗೆರೆಯನ್ನು ಹಿಂಸಿಸಿದಂತೆ ಸಂರಕ್ಷಿಸಿದರೆಂದು, ಲೋಕವೆಲ್ಲ ಹೊಗಳುತ್ತಿತ್ತು ಎಂದು ಬಣ್ಣಿಸಿದೆ. ಬಸದಿಯೋಜನಾದ ಪೊಲೆಯಾಮ್ಮೋಜನ ಮಗ ಬಲ್ಲನು ಇದನ್ನು ಮಾಡಿದಂತೆ ಹೇಳಿದೆ.
ಉಲ್ಲೇಖಗಳು
- EC. IX(R) BI. 388
- EC. V(O) BI. 123
- ಕರ್ನಾಟಕ ಜೈನ ಶಾಸನಗಳು – ಸಂಪುಟ ೨, ೫೨೯-೫೩೦