Skip to content
Home » ಕನ್ನಡ » ಜೈನ ಹಬ್ಬಗಳು » ದಶಲಕ್ಷಣ ಪರ್ವ » ಉತ್ತಮ ತ್ಯಾಗ ಧರ್ಮ

ಉತ್ತಮ ತ್ಯಾಗ ಧರ್ಮ

    ಉತ್ತಮ ತ್ಯಾಗ ಧರ್ಮ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಎಂಟನೇ ಧರ್ಮ.

    ತ್ಯಾಗಶಬ್ದಕ್ಕೆ ಬಿಡುವುದೆಂದು ಅರ್ಥ. ಮುನಿಧರ್ಮಪ್ರಕರಣದಲ್ಲಿ ಪರಿ ಗ್ರಹನಿವೃತ್ತಿಸ್ತ್ರಾಗ” ಎಂದೂ ಇದಕ್ಕೆ ಟೀಕೆಯಾಗಿ “ಪರಿಗ್ರಹಸ್ಯ ಚೇತನಾ ಚೇತನಲಕ್ಷಣಸ್ಯ ನಿವೃತ್ತಿಸ್ತಾಗ ಇತಿ ನಿಶ್ಚಿಯತೇ” ಎಂದೂ ರಾಜವಾರ್ಷಿಕ ದಲ್ಲಿ ಹೇಳಿರುವಂತೆ ಚೇತನಾ ಮತ್ತು ಅಚೇತನ ರೂಪವಾದ ಸಕಲವಸ್ತು ಗಳನ್ನೂ ಪರಿತ್ಯಜಿಸುವುದೆಂದರ್ಥವು. ಮಮತ್ವಬುದ್ಧಿಗೆ ವಿಷಯವಾದ ಪುತ್ರ ಕಳತ್ರ ಬಂಧು ಪರಿಚಾರಕ-ದಾಸೀದಾಸ ಮೊದಲಾದ ದ್ವಿಪಾದಪ್ರಾಣಿಗಳೂ, ಕುದುರೆ ಆಕಳು ಮೊದಲಾದ ಚತುಷ್ಪಾದ ಪ್ರಾಣಿಗಳೂ ಚೇತನಾಪರಿಗ್ರಹ ಗಳಾಗಿರುತ್ತವೆ. ಹಾಗೆಯೇ ಸ್ವಪ್ರಯೋಜನಕ್ಕಾಗಿ ತಾನು ಇಟ್ಟುಕೊಳ್ಳುವ ಧನ ಧಾನ್ಯ, ವಸ್ತ್ರ, ವಾಹನ ಕ್ಷೇತ್ರ ವಾಸ್ತು ಮೊದಲಾದ ಸಮಸ್ತ ಜಡವಸ್ತುಗಳು ಅಚೇತನ ಪರಿಗ್ರಹಗಳಾಗಿರುತ್ತವೆ.

    ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಎಂಟನೇ ಧರ್ಮ – ಉತ್ತಮ ತ್ಯಾಗ ಧರ್ಮ


    ಚೇತನಾಚೇತನರೂಪವಾದ ಪದಾರ್ಥಗಳಲ್ಲಿ ಇವು ನನ್ನವು” ಎಂಬ ಮಮತ್ವಬುದ್ಧಿಯಿದ್ದರೆ ಮತ್ತು ಅದರಿಂದ ಅವುಗಳನ್ನು ತನ್ನ ಉಪಯೋಗ ಕ್ಕೋಸ್ಕರ ಇಟ್ಟುಕೊಂಡರೆ, ಆ ಪದಾರ್ಥಗಳನ್ನು ಹೆಚ್ಚಾಗಿ ಸಂಗ್ರಹಿಸಬೇಕೆಂಬ ಆಕೆಯೂ ಅವುಗಳ ರಕ್ಷಣೆಯ ಚಿಂತೆಯೂ ಅವು ಕಳೆದು ಹೋದರೆ ವಿಯೋಗ ದುಃಖವೂ ಉಂಟಾಗುವುವು. ಅವುಗಳಿಂದ ಚಿತ್ರ ಚಾಂಚಲ್ಯ ವುಂಟಾಗುವುದು. ಆದುದರಿಂದ ಮುಮುಕ್ಷುವು ಸರ್ವಾನರ್ಥಕಾರಿಯಾದ ಆರೆಗೂ ಚಿಂತೆಗೂ ದುಃಖಕ್ಕೂ ಕಾರಣವಾದ ಚೇತನಾಚೇತನ ಪದಾರ್ಥಗ ಅಲ್ಲಿ ಮಮತ್ವಬುದ್ಧಿಪೂರ್ವಕವಾದ ಸಂಬಂಧವನ್ನು ಸಂಪೂರ್ಣವಾಗಿ ಬಿಡ ಬೇಕು. ಅಂದರೆ ಬಾಹ್ಯದಲ್ಲಿ ಆ ಪದಾರ್ಥಗಳನ್ನೂ ಅಂತರಂಗದಲ್ಲಿ ಮಮತ್ವವನ್ನೂ ಬಿಡಬೇಕು. ಹಾಗೆ ಬಿಟ್ಟರೆ ಅದಕ್ಕೆ ಉತ್ತಮತ್ಯಾಗಧರ್ಮ ಎಂದು ಹೆಸರು.

    error: Jain Heritage Centres - Celebrating Jain Heritage.....Globally!