Skip to content
Home » ಕನ್ನಡ » ಜಿನ ರತ್ನ ಭೂಷಣರು » ರತ್ನಾಕರವರ್ಣಿ

ರತ್ನಾಕರವರ್ಣಿ

    ರತ್ನಾಕರವರ್ಣಿ ೧೬ನೆಯ ಶತಮಾನದ ಜೈನಕವಿ. ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬನಾದ ರತ್ನಾಕರವರ್ಣಿಯ ಕಾಲ ಸುಮಾರು ಕ್ರಿ.ಶ. ೧೫೫೭. ಈತನ ತಂದೆಯ ಹೆಸರು ದೇವರಾಜ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಈತನ ಜನ್ಮಸ್ಥಳ. ರತ್ನಾಕರವರ್ಣಿಯು ವಿಜಯನಗರದ ಅರಸರ ಸಾಮಂತರಾಜನಾದ ಕಾರ್ಕಳದ ಭೈರವರಸರ ಆಸ್ಥಾನದಲ್ಲಿದ್ದ ಕವಿ. ದೀಕ್ಷಾಗುರು ಚಾರುಕೀರ್ತಿ ಆಚಾರ್ಯ, ಮೋಕ್ಷ ಗುರು ಹಂಸನಾಥ.

    ಬಿರುದು – ‘ಶೃಂಗಾರಕವಿ ಹಂಸರಾಜ’ “ರತ್ನಾಕರ ಸಿದ್ಧ”
    ರತ್ನಾಕರವರ್ಣಿಯ ಜಾತಕ ರೂಪುರೇಷೆ:
    ರತ್ನಾಕರನ ಜನನ – ಸುಮಾರು ೧೫೩೨
    ತ್ರಿಲೋಕಶತಕದ ರಚನೆ – ಸುಮಾರು ೧೫೫೭
    ಭರತೇಶವೈಭವದ ರಚನೆ – ಸುಮಾರು ೧೫೬೭ (ಅಂದರೇ ಆಗ ಕವಿಗೆ ೩೫ ವರ್ಷ ವಯಸ್ಸು)
    ರತ್ನಾಕರ ವೀರಶೈವನಾದುದು – ಸುಮಾರು ೧೫೭೨
    ರತ್ನಾಕರ ಮತ್ತೆ ಜೈನನಾದುದು – ಸುಮಾರು ೧೫೭೫
    ರತ್ನಾಕರಶತಕದ ರಚನೆ – ಸುಮಾರು ೧೫೭೭
    ಅಪರಾಜಿತಶತಕದ ರಚನೆ – ಸುಮಾರು ೧೫೮೨
    ಅಧ್ಯಾತ್ಮ ಗೀತದ ರಚನೆ – ಸುಮಾರು ೧೫೮೭
    ರತ್ನಾಕರನ ಮರಣ – ಕ್ರಿ.ಶ. ೧೬೦೦ರ ನಂತರ.

    ರತ್ನಾಕರವರ್ಣಿ ರಚಿಸಿದ ಕೃತಿಗಳು:
    • ಭರತೇಶ ವೈಭವ ರತ್ನಾಕರವರ್ಣಿಯ ಮೇರು ಕೃತಿ.
    • ತ್ರಿಲೋಕ ಶತಕ
    • ಅಪರಾಜಿತೇಶ್ವರ ಶತಕ
    • ರತ್ನಾಕರಾಧೀಶ್ವರ ಶತಕ
    • ಸೋಮೇಶ್ವರ ಶತಕ (ಕೆಲ ವಿದ್ವಾಂಸರ ಪ್ರಕಾರ ರತ್ನಾಕರವರ್ಣಿಯು ಈ ಕೃತಿಯನ್ನು ತನ್ನ ಬದುಕಿನ ಸಂದಿಗ್ಧ ಘಟ್ಟವೊಂದರಲ್ಲಿ ಮತಾಂತರಗೊAಡಾಗ ರಚಿಸಿದ್ದಾನೆ)
    • ಅಣ್ಣನ ಪದಗಳು
    ರತ್ನಾಕರವರ್ಣಿ ತನ್ನ ಕಾವ್ಯಗಳಲ್ಲಿ ತನ್ನ ಸ್ವಂತ ಜೀವಿತಕ್ಕೆ ಸಂಬAಧಿಸಿದ ಯಾವ ವಿವರಗಳನ್ನೂ ಹೇಳಿಲ್ಲ. ಇವನನ್ನು ಕುರಿತು ಕೆಲವು ಬಾಹ್ಯವಿವರಗಳು ದೊರೆತಿವೆ. ದೇವ ಚಂದ್ರ (೧೭೭೦-೧೮೪೧) ತನ್ನ ರಾಜಾವಳೀಕಥೆಯಲ್ಲಿ ರತ್ನಾಕರವರ್ಣಿಯ ಬಗ್ಗೆ ಕೆಲವು ವಿವರಗಳನ್ನು ಕೋಟ್ಟಿದ್ದಾನೆ. ಆತನ ಹೇಳಿಕೆಯ ಪ್ರಕಾರ ರತ್ನಾಕರವರ್ಣಿ ಸೂರ್ಯವಂಶಕ್ಕೆ ಸೇರಿದವನು. ಕ್ಷತ್ರಿಯ ಕುಲದವನು. ತುಳುನಾಡಿನವನು, ಮೂಡುಬಿದರೆಯವನು, ದೇವರಾಜನ ಮಗ, ರತ್ನಾಕರಾಧೀಶನೆಂದು ಹೆಸರು. ಬಾಲ್ಯದಲ್ಲಿ ಜೈನಾಗಮಗಳ ಶಿಕ್ಷಣವನ್ನು ಪಡೆದಿದ್ದ. ಕವಿಯಾದ ಮೇಲೆ ತೌಳವ ದೇಶದ ಭೈರವರಸರ ಒಡೆಯರ ಆಸ್ಥಾನ ಕವಿಯಾಗಿ ಶೃಂಗಾರಕವಿಯೆAಬ ಪ್ರಶಸ್ತಿ ಪಡೆದ.

    ಭರತೇಶ ವೈಭವ
    ಭರತೇಶ ವೈಭವವು ನಡುಗನ್ನಡ ಸಾಹಿತ್ಯದ ಒಂದು ಶ್ರೇಷ್ಠ ಕೃತಿ. ಇದು ರತ್ನಾಕರವರ್ಣಿಯ ಮೇರು ಕೃತಿ. ಹಳೆಗನ್ನಡದ ಕವಿಗಳು ಛಂದಸ್ಸುಗಳಲ್ಲಿ ಘನವಾದ ಕೃತಿಗಳನ್ನು ರಚಿಸುತ್ತಿದ್ದ ಕಾಲದಲ್ಲಿ ರತ್ನಾಕರವರ್ಣಿಯು ಸಾಂಗತ್ಯರೂಪದಲ್ಲಿ ಭರತೇಶ ವೈಭವವನ್ನು ರಚಿಸಿ ಕನ್ನಡ ಕಾವ್ಯದ ಹೊಸ ಶಕೆಯೊಂದಕ್ಕೆ ನಾಂದಿ ಹಾಡುತ್ತಾನೆ. ಆದುದರಿಂದಲೇ ಅವನಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಸಾಂಗತ್ಯ ಚಕ್ರ ಎಂಬ ಹೆಸರಿದೆ.
    ‘ಭರತೇಶ ವೈಭವ’ ಸಾಂಗತ್ಯ ರೂಪದಲ್ಲಿದೆ. ಆದಿತೀರ್ಥಂಕರ ವೃಷಭನಾಥನ ಮಗ ಭರತ ಈ ಕಾವ್ಯದ ನಾಯಕ. ಈ ಕಾವ್ಯದಲ್ಲಿ ಭೋಗವಿಜಯ, ದಿಗ್ವಿಜಯ, ಯೋಗವಿಜಯ, ಅರ್ಕಕೀರ್ತಿವಿಜಯ, ಮೋಕ್ಷವಿಜಯ ಎನ್ನುವ ಐದು ವಿಭಾಗಳಿದ್ದು ಒಟ್ಟು ಹತ್ತು ಸಾವಿರ ಪದ್ಯಗಳಿವೆ.

    ಭರತನನ್ನು ಕೇಂದ್ರವಾಗಿರಿಸಿ ಭರತೇಶ ವೈಭವ ರಚಿಸಿ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ನಾನ ಪಡೆದಿರುವ ಕವಿ ರತ್ನಾಕರ ವರ್ಣಿ ಶೃಂಗಾರ ಕವಿ, ಮತ್ತು ವಿಶ್ವ ಕವಿ.
    ರತ್ನಾಕರ ವರ್ಣಿಯ ಪ್ರಮುಖ ಕೃತಿ ಭರತೇಶ ವೈಭವ. ಜೈನರ ಪ್ರಥಮ ತೀರ್ಥಂಕರ ಆದಿನಾಥನ ಮಕ್ಕಳು ಭರತ ಮತ್ತು ಬಾಹುಬಲಿ. ಆ ಪೈಕಿ ಭರತನನ್ನು ತನ್ನ ಕಥಾ ನಾಯಕನನ್ನಾಗಿ ಮಾಡಿಕೊಂಡು ತ್ಯಾಗ ವಿಜಯ, ಭೋಗ ವಿಜಯ ಮತ್ತು ದಿಗ್ವಿಜಯ ಎಂದು ಮೂರು ಭಾಗದಲ್ಲಿ ಭರತೇಶ ವೈಭವವನ್ನು ರಚಿಸಿದ್ದಾನೆ. ರತ್ನಾಕರ ತನ್ನ ಕೃತಿಯಲ್ಲಿ ಜೈನ ಪುರಾಣ ಪರಂಪರೆಯಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಂಡಿದ್ದ. ಭರತ ಬಾಹುಬಲಿ ಯುದ ಪ್ರಸಂಗವನ್ನು ಬದಲಿಸಿದ್ದ, ಶೃಂಗಾರಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಎಂಬ ಕಾರಣಕ್ಕಾಗಿ ಕೆಲವು ಭಿನ್ನಾಭಿಪ್ರಾಯಗಳು ಬಂದ ಕಾರಣದಿಂದಾಗಿ ಆ ಬದಲಾವಣೆಗಳನ್ನು ಪುನಃ ಪರಂಪರೆಗೆ ಅನುಗುಣವಾಗಿ ತಿದ್ದಬೇಕು ಎಂದು ಹೇಳಿದಾಗ ರತ್ನಾಕರ ಅದನ್ನು ನಿರಾಕರಿಸಿದ. ಇದರಿಂದಲೇ ಭರತೇಶ್ವರ ವೈಭವ ಕಾವ್ಯಕ್ಕೆ ಆನೆಯ ಮೇಲೆ ಅಂಬಾರಿಯ ಗೌರವ ದೊರೆಯಲಿಲ್ಲ. ಇದರಿಂದಾಗಿ ರತ್ನಾಕರ ಮನನೊಂದ. ರತ್ನಾಕರ ಸುಮಾರು ಎರಡು ಸಾವಿರ ಭಕ್ತಿಗೀತೆಗಳನ್ನು ರಚಿಸಿದ್ದಾನೆ. ಇವುಗಳಲ್ಲಿ ಸುಮಾರು ಎಂಟು ನೂರು ಹಾಡುಗಳು ದೊರೆತಿವೆ. “ಅಣ್ಣನ ಹಾಡುಗಳು” ಎಂಬುದಾಗಿ ಇವು ಪ್ರಸಿದ್ಧವಾಗಿವೆ.

    Visit this link for an article About “Ratnakaravarni” in English

    error: Jain Heritage Centres - Celebrating Jain Heritage.....Globally!