ಶ್ರೀಕ್ಷೇತ್ರ ಶ್ರವಣಬೆಳಗೊಳ ಜೈನಮಠದ ನೂತನ ಶ್ರೀಗಳ ಪಟ್ಟಾಭಿಷೇಕ ಮಹೋತ್ಸವ 27 ಮಾರ್ಚ್ 2023 ರಂದು
ಅಹ್ವಾನ ಪತ್ರಿಕೆ
ಸ್ವಸ್ತಿಶ್ರೀ ಮದ್ರಾಯ ರಾಜಗುರು ಭೂಮಂಡಲಾ ಚಾರ್ಯವರ್ಯ ಮಹಾವಾದವಾದೀಶ್ವರ ರಾಯ ವಾದಿ ಪಿತಾಮಹ ಸಕಲ ವಿದ್ವಜ್ಜನ ಸಾರ್ವಭೌಮಾದ್ಯನೇಕ ಬಿರುದಾವಳಿ ವಿರಾಜಮಾನರುಂ ಪುಸ್ತಕಗಚ್ಚ ಕುಂದಕುಂದಾನ್ವಯ ದೇಶೀಯ ಗಣಾಗ್ರಗಣ್ಯರುಂ
ಕೂಷ್ಮಾಂಡಿನೀದೇವಿ ಲಬ್ಬವರ ಪ್ರಸನ್ನರುಂ ಚಾವುಂಡರಾಯರಾರ್ಚಿತಪಾದರಂ, ಬಲ್ಲಾಳರಾಯ ಜೀವರಕ್ಷಾಪಾಲಕರುಂ ಶ್ರೀ ಮನ್ನಿಜ ಘಟಕಸ್ಥಾನ, ದಿಲ್ಲಿ, ಕನಕಾದಿ, ಶ್ರೀಮದ್ ಶ್ರವಣಬೆಳಗೊಳ ಸಿದ್ಧಸಿಂಹಾಸನಾಧೀಶ್ವರ
ಶ್ರೀಮದ್ ಅಭಿನವ ಪಟ್ಟಾಚಾರ್ಯವರ್ಯ ಪಂಡಿತಾಚಾರ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳಾಗಿದ್ದವರು
ಕೀರ್ತಿಶೇಷರಾಗಿರುವ ಪ್ರಯುಕ್ತ
ಪೂಜ್ಯರಿಂದಲೇ ವಿಚಾರಪಟ್ಟ ಕ್ಷುಲಕ ದೀಕ್ಷಿತರಾಗಿ
ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವವರೂ ಆದ ಸಸ್ತಿಶ್ರೀ ಅಗಮಕೀರ್ತಿ ಸ್ವಾಮಿಗಳವರ
ಸಮಸ್ತ ಜೈನ ಮಠಾಧಿಪತಿಗಳ ಪಾವನ ಸಾನಿಧ್ಯದಲ್ಲಿ ಸ್ವಸ್ತಿಶ್ರೀ ಮಹಾವೀರ ಶಕ 2549ನೇ ಶೋಭಕೃತ ನಾಮ ಸಂವತ್ಸರದ ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ರೋಹಿಣಿ ನಕ್ಷತ್ರ, ದಿನಾಂಕ: 27 ಮಾರ್ಚ್ 2023ನೇ ಸೋಮವಾರದಂದು ಬೆಳಗ್ಗೆ 09:21 ರಿಂದ ಸಲ್ಲುವ ವೃಷಭ ಲಗ್ನದಲ್ಲಿ ಶ್ರೀ ಗುರುದೇವತಾನುಗ್ರಹ ಪೂರ್ವಕ
ಶ್ರೀಕ್ಷೇತ್ರ ಶ್ರವಣಬೆಳಗೊಳ ಮಹಾಕ್ಷೇತ್ರದ ಶ್ರೀಮಠದ ಶ್ರೀ ಚಂದ್ರನಾಥಸ್ವಾಮಿ ದಿವ್ಯ ಸನ್ನಿಧಿಯಲ್ಲಿ ಶ್ರೀ ಪಟ್ಟಾಭಿಷೇಕ ಮಹೋತ್ಸವ ಜರುಗಲಿರುವುದು,
ಸಮಸ್ತರೂ ದಯಮಾಡಿಸಿ ಈ ಧರ್ಮಕಾರ್ಯವನ್ನು ಸಾಂಗವಾಗಿ ನಡೆಸಿ, ಶ್ರೀ ಗುರುದೇವರ ಫಲ ಮಂತ್ರಾಕ್ಷತೆಗಳನ್ನು ಸ್ವೀಕರಿಸಿ ಪುಣ್ಯಕೀರ್ತಿಗಳಿಗೆ ಭಾಗಿಗಳಾಗಬೇಕಾಗಿ ಅಪೇಕ್ಷಿಸುತ್ತೇವೆ.
ಗೌರವ ಉಪಸ್ಥಿತಿ: ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ.
ದಿನಾಂಕ: 26 ಮಾರ್ಚ್ 2023ನೇ ಭಾನುವಾರ ಬೆಳಗ್ಗೆ 11:00 ಗಂಟೆಗೆ ಶ್ರೀಮಠದಲ್ಲಿ ಗಣಧರವಲಯ ಆರಾಧನೆ
ದಿನಾಂಕ:27 ಮಾರ್ಚ್ 2023ನೇ ಸೋಮವಾರ
ಪ್ರಾತಃಕಾಲ 5:00ಕ್ಕೆ ಸುಪ್ರಭಾತ
ಪೂಜ್ಯಶ್ರೀ ಆಗಮಕೀರ್ತಿ ಸ್ವಾಮಿಗಳವರಿಗೆ ಮಂಗಲ ಸ್ನಾನ, ಜಿನಮಂದಿರ ದರ್ಶನ, ಪಟ್ಟಿಬಂಧ, ಮಂಗಲ ಕಳಶಗಳ ಸ್ಥಾಪನೆ, ಜಪ, ಧ್ಯಾನ, ಸಕಲೀಕರಣ.
ಪ್ರಾತಃಕಾಲ 6:30ಕ್ಕೆ ಸುಪ್ರಭಾತ
ಶ್ರೀ ಚಂದ್ರಪ್ರಭ ತೀರ್ಥ೦ಕರರಿಗೆ ನವಕಳಶಾಭಿಷೇಕ ಪೂಜೆ, ಮಹಾ ಶಾಂತಿವಂತ್ರ ಪಠಣ, ಶಾಂತಿಧಾರಾ, ಕ್ಷೇತ್ರದ ಎಲ್ಲಾ ಬಸದಿಗಳಲ್ಲೂ ವಿಶೇಷ ಅಭಿಷೇಕ ಪೂಜೆ ಶ್ರೀ ಕೂಷ್ಠಾಂಡಿನೀ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಶೋಡಶೋಪಚಾರ ಸಹಿತ ಮಹಾ ಮಂಗಳಾರತಿ.
ಬೆಳಗ್ಗೆ 9:00 ರಿಂದ
ಪಟ್ಟಾಭಿಷೇಕ ಪ್ರಯುಕ್ತ ಪೂರ್ವಕ್ರಿಯೆಗಳು, ಸಿಂಹಾಸನ ಪೂಜೆ ಇತ್ಯಾದಿ.
ಬೆಳಗ್ಗೆ 9:21 ರಿಂದ ಸಲ್ಲುವ ವೃಷಭ ಲಗ್ನದಲ್ಲಿ ಸಿಂಹಾಸನಾರೋಹಣ ಪೂರ್ವಕ ಪಟ್ಟಾಭಿಷೇಕ ಮಹೋತ್ಸವ, ಪಟ್ಟದ ಉಂಗುರ, ಪರಂಪರಾಗತ ಸುವರ್ಣಪಿಂಛ, ಶಿಖಾ ಮೊಹರು ಸಮರ್ಪಣೆ, ಸುವರ್ಣ ಪಾದುಕೆಗಳಿಗೆ, ಪಾದಪೂಜೆ – ಶ್ರೀಗಳ ಪಾದಪೂಜೆ, ಪ್ರಶಸ್ತಿ ವಾಚನಾ, ಭಕ್ತಿ ಕಾಣಿಕೆ ಸಮರ್ಪಣೆ, ಧರ್ಮೋಪದೇಶ, ಆಶೀರ್ವಾದ.
ಮಧ್ಯಾಹ್ನ 3:00 ರಿಂದ ನೂತನ ಶ್ರೀಗಳವರ ಪಲ್ಲಕ್ಕಿ ಉತ್ಸವ.
ತಮ್ಮಗಳ ಆಗಮನಾಭಿಲಾಷಿಗಳು,
ಸಕಲ ದಿಗಂಬರ ಜೈನ ಸಮಾಜ, ಶ್ರವಣಬೆಳಗೊಳ
ನೂತನ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪಟ್ಟಾಭಿಷೇಕ ಸಮಿತಿ, ಶ್ರವಣಬೆಳಗೊಳ
ಸದಸ್ಯರು, ಎಸ್.ಡಿ.ಜೆ.ಎಂ.ಐ. ಮ್ಯಾನೇಜಿಂಗ್ ಕಮಿಟಿ, ಶ್ರವಣಬೆಳಗೊಳ