ಧರ್ಮಸ್ಥಳ, ೮ ಫೆಬ್ರವರಿ ೨೦೧೯: ಧರ್ಮಸ್ಥಳ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಶುಕ್ರವಾರ ಸಂಜೆ ಚಾಲನೆ ಸಿಕ್ಕಿದೆ. ಧರ್ಮಸ್ಥಳದಲ್ಲಿ ಸಂತರ ಸಮ್ಮೇಳನ ಪ್ರಾರಂಭವಾಗಿದೆ. ಈ ಮೂಲಕ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ಸಿಕ್ಕಿದೆ.ಇಂದಿನ ಸಮಾವೇಶದಲ್ಲಿ ನಾಡಿನ ಶ್ರೇಷ್ಠ ಸಾಧು ಸಂತರು, ಜೈನ ಮುನಿಗಳು ನಾಡಿಗೆ ಧರ್ಮ ಸಂದೇಶ ನೀಡಿದ್ದಾರೆ.
ಇಂದಿನ ಕಾರ್ಯಕ್ರಮದಲ್ಲಿ ಕಾರ್ಕಳದ ದಾನಶಾಲರ ಧ್ಯಾನಯೋಗಿ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಶ್ರೀ ಕ್ಷೇತ್ರ ಹುಂಬುಂಜದ ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ,ಒಡಿಯೂರು ಮಹಾಸಂಸ್ಥಾನದಗಲ ಗುರುದೇವಾನಂದ ಸ್ವಾಮೀಜಿ, ಶ್ರೀ 108 ವರ್ಧಮಾನ ಸಾಗರಜೀ ಮುನಿಮಹಾರಾಜ ಸೇರಿದಂತೆ ವಿವಿಧ ಸಾಧು ಸಂತರು,ಜೈನ ಮುನಿಗಳು,ಶ್ರಾವಕ ಶ್ರಾವಿಕೆಯರು ಹಾಜರಿದ್ದರು.
ಇಂದಿನಿಂದ ಬೆಟ್ಟದ ಮೇಲಿನ ಬಾಹುಬಲಿಗೆ ದೈವಿಕ ವಿಧಿ ವಿಧಾನಗಳ ಮೂಲಕ ಮಜ್ಜನ ಪ್ರಾರಂಭಗೊಳ್ಳಲಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ಸೇರಿ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ.
ಫೆಬ್ರವರಿ 19ರವರೆಗೆ ನಡೆಯುವ ಈ ಮಹಾಮಸ್ತಕಾಭಿಷೇಕದ ಕಡೆಯ ದಿನಗಳು(ಫೆಬ್ರವರಿ 16,17,18) ಬಾಹುಬಲಿಗೆ ಮಹಾಮಜ್ಜನ ನೆರವೇರಲಿದೆ. – ಕೃಪೆ: ಕನ್ನಡಪ್ರಭ