ಸರ್ವ ಧರ್ಮಗಳ ಜನರನ್ನು ಏಕ ರೀತಿಯಲ್ಲಿ ಕಾಣುವ ಶಾಂತಿಧಾಮ ಕರುನಾಡಿನ ಧರ್ಮಸ್ಥಳ ಕ್ಷೇತ್ರ. ಅಲ್ಲಿನ ಮಂಜುನಾಥ ಸ್ವಾಮಿ ಸತ್ಯ, ನ್ಯಾಯಕ್ಕೆ ಹೆಸರಾಗಿದ್ದಾನೆ. ಇದೇರೀತಿ ಅಲ್ಲಿನ ಹೆಗ್ಗಡೆ ಕುಟುಂಬ ಸಹ “ಮಾತು ಬಿಡ ಮಂಜುನಾಥ” ಎಂದೇ ಖ್ಯಾತಿ ಗಳಿಸಿದ ವೀರೇಂದ್ರ ಹೆಗ್ಗಡೆ ಹಾಗೂ ಅವರ ಹಿಂದಿನ ತಲೆಮಾರು ಹಲವು ಶತಮಾನಗಳಿಂದ ಧರ್ಮ ಪರಿಪಾಲನೆ ಕಾರ್ಯ ಮಾಡುತ್ತಾ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಇದೀಗ ಇಂದಿನಿಂದ ಧರ್ಮಸ್ಥಳದಬಾಹುಬಲಿಗೆ ನಾಲ್ಕನೇ ಮಹಾಮಸ್ತಕಾಭಿಷೇಕ ನಡೆಯಲಿದ್ದು ಇದರ ಹಿನ್ನೆಲೆಯಲ್ಲಿ ಧರ್ಮಸ್ಥಳಕ್ಕೆ ಬಾಹುಬಲಿ ಆಗಮನ ಹೇಗಾಯಿತೆಂಬ ವಿಚಾರವನ್ನು ಸಂಕ್ಷಿಪ್ತವಾಗಿ ತಿಳಿಯಲು ಪ್ರಯತ್ನಿಸೋಣ.
170 ಟನ್ ತೂಕದ ಈ ಪ್ರತಿಮೆ ಕಾರ್ಕಳದಲ್ಲಿ ಸೃಷ್ಟಿಯಾಗಿದ್ದು ಧರ್ಮಸ್ಥಳದಲ್ಲಿ ಸ್ಥಾಪನೆಗೊಳ್ಳುವವರೆಗಿನ ಕಥೆ ರೋಚಕವಾದದ್ದು.ಅದರ ನಿರ್ಮಾಣದ ಹಿಂದೆ ವೀರೇಂದ್ರ ಹೆಗ್ಗಡೆಯವರ ತಾತ ಹಾಗೂ ತಂದೆಯವರಾದ ಮಂಜಯ್ಯ ಹೆಗ್ಗಡೆ,.ರತ್ನವರ್ಮ ಹೆಗ್ಗಡ ಅವರ ಕನಸಿದೆ ರತ್ನವರ್ಮ ಹೆಗ್ಗಡೆ ಮತ್ತು ಅವರ ಪತ್ನಿ ರತ್ನಮ್ಮನವರಿಗೆ ಕಾರ್ಕಳ, ವೇಣೂರು ಬಾಹುಬಲಿಗಳ ಮಹಾಮಸ್ತಕಾಭಿಷೇಕಗಳ ಕಂಡು ನಲ್ಯಾಡಿಬೀಡಿನಲ್ಲಿ ಸಹ ಬಾಹುಬಲಿ ಸ್ಥಾಪನೆಯಾಗಬೇಕೆಂದು ಪ್ರೇರಣೆಯಾಗಿತ್ತು. ಇದಕ್ಕಾಗಿ ಅವರು ಕಾರ್ಕಳ ಸಮೀಪದ ಮಂಗಳಪಾದ ಎಂಬಲ್ಲಿ 100 ಅಡಿ ಎತ್ತರ, 48 ಅಡಿ ಅಗಲದ ಬಂಡೆ ಗುರುತಿಸಿ ಬಾಹುಬಲಿ ಮೂರ್ತಿ ಕಡೆಯಲು ಮಹೂರ್ರ್ತ ನಿಗದಿಪಡಿಸಿದ್ದರು. 1967ರ ವಿಜಯ ದಶಮಿಯಂದು ಶಾಸ್ತ್ರೋಕ್ತವಾಗಿ ಮೂರ್ತಿ ಕೆತ್ತನಾ ಕಾರ್ಯ ಪ್ರಾರಂಬವಾಗಿತ್ತು.
6 ಅಡಿ ಉದ್ದದ ಮುಖ, 1 ಅಡಿ ಕುತ್ತಿಗೆ, 22.3 ಅಡಿಗಳ ತೋಳುಗಳು, 19.5 ಅಡಿಗಳ ಸೊಂಟದ ಸುತ್ತಳತೆ, 13 ಅಡಿಗಳ ಬೆನ್ನಿನ ಭಾಗ, 13.5 ಅಡಿಗಳ ಭುಜದ ಅಗಲ, 1.4 ಅಡಿಗಳ ದಪ್ಪ ಪಾದನೆಗಳು, 1 ಅಡಿ ಹೆಬ್ಬೆರಳು, 3.5 ಅಡಿಗಳ ಕಿವಿಗಳು, ಹಾಗೂ 1.10 ಅಡಿಗಳ ಮೂಗು, ವಿಗ್ರಹವು ಪಾದದಿಂದ ನೆತ್ತಿಯವರೆಗೆ 39 ಅಡಿಗಳು ಎತ್ತರ ಪೀಠ 13 ಅಡಿ ಪೀಠ ಸಹಿತ ವಿಗ್ರಹದ ಎತ್ತರ 52 ಅಡಿ ಬಾಹುಬಲಿ ನಿರ್ಮಾಣವಾಗಿದ್ದ. ರೆಂಜಾಳ ಗೋಪಾಲಶಣೈ ಎಂಬುವವರು ಇದನ್ನು ಕೆತ್ತಿದ್ದರು
ಕಾರ್ಕಳದಿಂದ 69 ಕಿಮೀ ದೂರದ ಧರ್ಮಸ್ಥಳಕ್ಕೆ 1973ರ ಫೆ.15ರಂದು ಪ್ರಯಾಣ ಪ್ರಾರಂಭಿಸಿದ ಬಾಹುಬಲಿ .ಮೂರು ದಿನಗಳ ಕಾಲ ಪ್ರಯಾಣ ಮಾಡಿ ಫೆ.18ಕ್ಕೆ ಧರ್ಮಸ್ಥಳ ಸೇರಿದನು. ಆದರೆ. ವಿಗ್ರಹವನ್ನು ರತ್ನಗಿರಿ ಬೆಟ್ಟದಲ್ಲಿ ನಿಲ್ಲಿಸಿ ಪ್ರತಿಷ್ಠಾಪನೆ ಮಹೋತ್ಸವ ನೆರವೇರಲು ಮತ್ತೆ ನಾಲ್ಕು ವರ್ಷ ಹಿಡಿದಿತ್ತು.1982ರಲ್ಲಿ ಈ ಕಾರ್ಯ ಯಶಸ್ವಿಯಾಗಿ ಮುಗಿದು ಮೊದಲ ಮಸ್ತಕಾಭಿಷೇಕ ನಡೆದಿತ್ತು.
ಬಾಹುಬಲಿಯ ಬೃಹತ್ ಏಕಶಿಲಾ ಮೂರ್ತಿಯನ್ನು ಸಾಗಿಸಿದ್ದು ಸಹ ರೋಚಕ ಗಾಥೆಯಾಗುತ್ತದೆ. ಕಾರ್ಕಳ-ಧರ್ಮಸ್ಥಳದ ಮಾರ್ಗದುದ್ದ್ದಕ್ಕೂ ಜನರು ಲಕ್ಷ ಸಂಖ್ಯೆಯಲ್ಲಿ ಸೇರಿ ಜಯಘೋಷಗಳನ್ನು ಹಾಕಿ ಬಾಹುಬಲಿಗೆ ಸ್ವಾಗತ ಕೋರುತ್ತಿದ್ದರು. ಮುಂಬೈ ಮೂಲದ ಮಂಗತ್ ರಾಮ್ ಸಂಸ್ಥೆ ಈ ಬಾಹುಬಲಿ ವಿಗ್ರಹ ಸಾಗಾಟದ ಜವಾಬ್ದಾರಿ ಹೊತ್ತಿತ್ತು. ಮಾಲೀಕ ದೀನನಾಥ ಜಬಾನ್ ಈ ಸಂಸ್ಥೆಯ ಮಾಲೀಕನಾಗಿದ್ದನು. ಅದಕ್ಕಾಗಿ ದೈತ್ಯ ಗಾತ್ರದ ಟ್ರ್ಯಾಲಿ ಹಾಗೂ ಅದಕ್ಕೆ ಪೂರಕವಾಗಿರುವ ಟಯರ್ ಗಳ ನಿರ್ಮಾಣ ಮಾಡಲಾಗಿತ್ತು. 64 ಗಾಲಿಗಳುಳ್ಳ 20 ಟನ್ ಭಾರದ, 40 ಅಡಿ ಉದ್ದದ ಟ್ರ್ಯಾಲಿ ಅದಾಗಿತ್ತು.
– ಲೇಖನ ಕೃಪೆ: ಕನ್ನಡಪ್ರಭ