‘ಜೈನ ಧರ್ಮ ಸಮಾಜ ವಾದವನ್ನು ಬೋಧಿಸುತ್ತದೆ’ ಎಂದು ಚಾವುಂಡರಾಯ ಪ್ರಶಸ್ತಿ ಪುರಸ್ಕೃತ ಕವಿ ಧರಣೇಂದ್ರ ಕುರಕುರಿ ಹೇಳಿದರು.
ಬೆಳಗಾವಿ, ಜನವರಿ ೨೪, ೨೦೧೭: ‘ಜೈನ ಧರ್ಮ ಸಮಾಜ ವಾದವನ್ನು ಬೋಧಿಸುತ್ತದೆ’ ಎಂದು ಚಾವುಂಡರಾಯ ಪ್ರಶಸ್ತಿ ಪುರಸ್ಕೃತ ಕವಿ ಧರಣೇಂದ್ರ ಕುರಕುರಿ ಹೇಳಿದರು.
ನಗರದ ಭರತೇಶ ಶಿಕ್ಷಣ ಸಂಸ್ಥೆ, ಹಂಪಿ ಕನ್ನಡ ವಿಶ್ವವಿದ್ಯಾಲಯ, ಆ.ನೇ. ಉಪಾಧ್ಯೆ ಕನ್ನಡ ಅಧ್ಯಯನ ಕೇಂದ್ರ ದಿಂದ ಸೋಮವಾರ ಭರತೇಶ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾದ ಬಾಳಾ ಸಾಹೇಬ ಲೋಕಾಪುರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ‘ದಮನಿತ ವಿಚಾರವನ್ನು ಹೇಳುವ ಗ್ರಂಥವನ್ನು ತಿರಸ್ಕರಿಸಬೇಕು. ಇದಕ್ಕಾಗಿ ಮನು ಸ್ಮೃತಿ ಯನ್ನೂ ತಿರಸ್ಕರಿಸಬೇಕು’ ಎಂದರು.
ಮನು ಬರೆದದ್ದನ್ನು ಒಪ್ಪಲಾಗದು: ಬಿ.ಎಂ.ಶ್ರೀ ಪ್ರಶಸ್ತಿಗೆ ಭಾಜನರಾದ ಕಮಲಾ ಹಂಪನಾ ಸತ್ಕಾರ ಸ್ವೀಕರಿಸಿ ಮಾತನಾಡಿ, ‘ಮನು ಹೆಣ್ಣಿನ ಬಗ್ಗೆ ಅತ್ಯಂತ ಕೆಟ್ಟದಾಗಿ, ಕೀಳಾಗಿ ಬಿಂಬಿಸಿ ದ್ದಾನೆ. ಹೀಗಾಗಿಯೇ ಮನುಧರ್ಮ ಶಾಸ್ತ್ರ ವನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರು ಸಾರ್ವಜನಿಕವಾಗಿ ಸುಟ್ಟು ಹಾಕಿ ದರು. ಮನು ಅಷ್ಟು ಕೆಟ್ಟವ ಹಾಗೂ ನೀಚನಾಗಿದ್ದ. ಅವನು ಬರೆದಿರುವು ದನ್ನು ಯಾರೂ ಒಪ್ಪಲಾಗದು’ ಎಂದರು.
ನಿವೃತ್ತ ಪ್ರಾಧ್ಯಾಪಕ ಬಾಳಣ್ಣ ಶೀಗಿಹಳ್ಳಿ ಅಭಿನಂದನಾಪರ ಭಾಷಣ ಮಾಡಿದರು. ಸಮಾಜಸೇವಕ, ಶಿಕ್ಷಣ ಪ್ರೇಮಿ ಗೋಪಾಲ ಜಿನಗೌಡ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಹಿರಿಯ ಕವಿ ಜಿನದತ್ತ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಭರತೇಶ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪುಷ್ಪದಂತ ದೊಡ್ಡಣ್ಣವರ, ರಾಜೀವ ದೊಡ್ಡಣವರ, ಶ್ರೀಪಾದ ಖೇಮಲಾಪುರೆ ಭಾಗವಹಿಸಿದ್ದರು. – ಕೃಪೆ: ಪ್ರಜಾವಾಣಿ