ಮೈಸೂರು (ಕರ್ನಾಟಕ), 24 ಡಿಸೆಂಬರ್ 2023: ಮೈಸೂರಿನಿಂದ 12 ಕಿಲೋಮೀಟರ್ ದೂರದಲ್ಲಿರುವ ವರುಣ ಎಂಬ ಗ್ರಾಮದಲ್ಲಿ ಜೈನ ತೀರ್ಥಂಕರ ಮತ್ತು ಯಕ್ಷಿ ವಿಗ್ರಹಗಳು ಪತ್ತೆ ಯಾಗಿವೆ.
ಒಳಚರಂಡಿ ಕಾಮಗಾರಿಗಾಗಿ ನೆಲ ಅಗೆಯುತ್ತಿದ್ದಾಗ ಈ ವಿಗ್ರಹಗಳು ಪತ್ತೆಯಾಗಿವೆ.
ವರುಣವು ಪುರಾತನ ಜೈನ ಪರಂಪರೆಯ ಕೇಂದ್ರವಾಗಿದ್ದು, ಅದರ ಜೈನ ಇತಿಹಾಸವು ಕ್ರಿ.ಶ. 8 ನೇ ಶತಮಾನದಿಂದ ಆರಂಭವಾಗುತ್ತದೆ. ಗ್ರಾಮದ ಭೂತೇಶ್ವರ ದೇವಾಲಯದ ಆವರಣದಲ್ಲಿಸಿರುವ ಕೆಲವು ವಿಗ್ರಹಗಳು ಮತ್ತು ಜೈನ ಶಾಸನಗಳು ಈ ಕ್ಷೇತ್ರದಲ್ಲಿನ ಜೈನಧರ್ಮದ ಪ್ರಾಚೀನತೆಯನ್ನು ಸಾಬೀತುಪಡಿಸುತ್ತದೆ.
ರಾಜ್ಯ ಪುರಾತತ್ವ ಇಲಾಖೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ವಿಭಾಗದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದ್ದರು. ಜೈನ ಸಮುದಾಯದ ಸದಸ್ಯರಾದ ಮೈಸೂರಿನ ಶ್ರೀ ಎನ್.ಪ್ರಸನ್ನ ಕುಮಾರ್, ಶ್ರೀಮತಿ ನಾಗರತ್ನ ಪ್ರಸನ್ನ ಕುಮಾರ್, ಶ್ರೀ ವಿಜಯಕುಮಾರ್ ಮತ್ತು ಶ್ರೀ ಎನ್.ಶ್ರೇಯಸ್ ಕೂಡ ಸ್ಥಳಕ್ಕೆ ಭೇಟಿ ನೀಡಿದರು.
ಪತ್ತೆಯಾದ ವಿಗ್ರಹಗಳ ಕುರಿತು ಹೆಚ್ಚಿನ ಅಧ್ಯಯನ ಕೈಗೊಳ್ಳಲು ಪುರಾತತ್ವ ತಜ್ಞರು 27ನೇ ಡಿಸೆಂಬರ್ 2023 ರಂದು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ವರುಣ ಬಗ್ಗೆ ಹೆಚ್ಚಿನ ವಿವರಗಳಿಗೆ – http://www.jainheritagecentres.com/blogs/heritage-highlight/varuna-jain-ruins-inscriptions/.
ವರುಣ ಬಗ್ಗೆ ವಿಶೇಷ ವೀಡಿಯೋ ವೀಕ್ಷಿಸಲು – https://fb.watch/p85SwZ_YcI/?mibextid=Nif5oz.
– ಜೈನ್ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ; ಚಿತ್ರಗಳು ಹಾಗೂ ಸುದ್ದಿ ಕೃಪೆ ಶ್ರೀ ಎನ್. ಪ್ರಸನ್ನಕುಮಾರ್, ಮೈಸೂರು.



