ಈಗಾಗಲೆ ಶೇ. 90 ರಷ್ಟು ರೈಲ್ವೆ ಕಾಮಗಾರಿ ಮುಕ್ತಾಯವಾಗಿದ್ದು, ಕುಣಿಗಲ್ ಸಮೀಪ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ವ್ಯತ್ಯಯವಾಗಿದ್ದರಿಂದ ಕಾಮಗಾರಿ ವಿಳಂಬವಾಗಿದೆ. ಇದು ಬಗೆಹರಿದ ಮೇಲೆ ಕಾಮಗಾರಿ ಚುರುಕಾಗಲಿದೆ. ಸೆಪ್ಟೆಂಬರ್ಗೆ ಕಾಮಗಾರಿ ಮುಕ್ತಾಯ ಮಾಡುವುದಾಗಿ ಗುತ್ತಿಗೆದಾರ ಭರವಸೆ ನೀಡಿದ್ದಾರೆ ಎಂದು ಚನ್ನರಾಯಪಟ್ಟಣದಲ್ಲಿ ಅಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.
ಶ್ರವಣಬೆಳಗೊಳದ ಮಹಾ ಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಪೂರ್ವಭಾವಿ ಸಭೆ ನಡೆಸಲು ಜೂ. 29 ರಂದು ದಿನಾಂಕ ನಿಗದಿಯಾಗಿದೆ. ಅಂದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗುವುದು. ಈ ಹಿಂದೆ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ರಾಕೇಶ್ ಸಿಂಗ್ ಅವರನ್ನು ಮಹಾ ಮಸ್ತಕಾಭೀಷೆಕದ ವಿಶೇಷ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದರು. – ಕೃಪೆ: ಈನಾಡು ಇಂಡಿಯಾ