ಮಂಗಳೂರು, 12 ಅಕ್ಟೋಬರ್ 2019: ಕರ್ನಾಟಕ ಪೋಸ್ಟಲ್ ಸರ್ಕಲ್, ಅಂಚೆ ಇಲಾಖೆ, ಭಾರತ ಸರ್ಕಾರದ ವತಿಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜೈನ ಬಸದಿ ಹಾಗೂ ವಿಗ್ರಹಗಳ ಕುರಿತ ಛಾಯಾಚಿತ್ರ ಪೋಸ್ಟ್‌ಕಾರ್ಡ್‍ಗಳನ್ನು ಬಿಡುಗಡೆ ಮಾಡಲಾಗಿದೆ. ಅಂಚೆ ಇಲಾಖೆಯ ವತಿಯಿಂದ ನಡೆಯುತಿರುವ 12ನೇ ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನವಾದ KARNAPEX-2019 ಕರ್ನಾಪೆಕ್ಸ್-೨೦೧೯ ನ ಸಮಾರಂಭದಲ್ಲಿ ಜಸ್ಟಿಸ್ ಎನ್.ಸಂತೋಷ್ ಹೆಗ್ಡೆಯವರು ಬಿಡುಗಡೆ ಮಾಡಿದರು. ನೇರಂಕಿ ಪಾರ್ಶ್ವನಾಥ್ ರವರು ಜೈನ ಸಮಾಜದ ಪ್ರತಿನಿಧಿಯಾಗಿ ಸಮಾರಂಭದಲ್ಲಿ ಭಾಗವಹಿಸಿದ್ದರು.
ಏಕಕಾಲದಲ್ಲಿ ಹತ್ತು ಛಾಯಾಚಿತ್ರ ಪೋಸ್ಟ್‌ಕಾರ್ಡ್‍ಗಳು ಬಿಡುಗಡೆಗೊಳ್ಳುತ್ತಿರುವುದು ಜೈನಧರ್ಮಕ್ಕೆ ಹಾಗೂ ಧರ್ಮೀಯರಿಗೆ ವಿಶೇಷವಾಗಿದ್ದು ಹೆಮ್ಮೆಯ ವಿಷಯವಗಿದೆ.
ಹೊಂಬುಜದ ಸ್ವಸ್ತಿಶ್ರೀ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಯವರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾದ ತಂಡಕ್ಕೆ ಮಾರ್ಗದರ್ಶನ ನೀಡಿ ಆಶೀರ್ವದಿಸಿದ್ದಾರೆ.
ಹುಬ್ಬಳ್ಳಿಯ ಮಹಾವೀರ‍್ ಕುಂದೂರ‍್; wwww.jainheritagecentres.com ನ ಬೆಂಗಳೂರಿನವರಾದ ಶ್ರೀ ನಿತಿನ್ ಹೆಚ್.ಪಿ.ರವರು ಈ ಪ್ರಯತ್ನದ ಮುಂದಾಳತ್ವ ವಹಿಸಿದ್ದರು.
ಮಂಗಳೂರಿನ ಮಾಂಡೋವಿ ಮೋಟಾರ್ಸ್‌ನಲ್ಲಿ ಚೀಫ್ ಜನರಲ್ ಮ್ಯಾನೇಜರ್ ಆಗಿರುವ ಮೂಡುಬಿದ್ರೆಯ ಶ್ರೀ ನೇರಂಕಿ ಪಾರ್ಶ್ವನಾಥರವರು ಈ ಕಾರ್ಯಕ್ಕೆ ಹಗಲಿರುಳು ಶ್ರಮಿಸಿದ್ದಾರೆ. ಪ್ರಕಟಿಸಲಾದ ಪೋಸ್ಟ್‌ಕಾರ್ಡ್‍ಗಳಲ್ಲಿನ ಚಿತ್ರಗಳು ಹೆಚ್ಚಿನವು ಶ್ರೀ ಪಾರ್ಶ್ವನಾಥ್‌ರವರದ್ದಾಗಿದ್ದು ಕೆಲವು ಚಿತ್ರಗಳು ಶ್ರೀ ನಿತಿನ್ ರವರದ್ದಾಗಿವೆ.
ಮೂಡುಬಿದ್ರೆಯ ಪ್ರೊ.ಎಸ್.ಪಿ.ಅಜಿತ್ ಪ್ರಸಾದ್ ರವರು ಈ ಪ್ರಯತ್ನಕ್ಕೆ ಬೇಕಾದ ಜೈನಧರ್ಮಕ್ಕೆ ಸಂಬಂಧಿಸಿದ ಮಾಹಿತಿಯನ್ನೊದಗಿಸಿ ಸಹಕರಿಸಿದರು. ಈ ಪ್ರಯತ್ನದಲ್ಲಿ ನೇರ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತಂಡವರು ತಮ್ಮ ಧನ್ಯವಾದಗಳನ್ನು ತಿಳಿಸಿದ್ದಾರೆ.
ಎಲ್ಲಕ್ಕಿಂತ ವಿಶೇಷವಾಗಿ ಶ್ರೀ ಮಹಾವೀರ್ ಕುಂದೂರ್ ರವರು ಪ್ರಯತ್ನ ವಿಶೇಷವಾದದ್ದು.
ಜೈನ ಬಸದಿಗಳು ಹಾಗೂ ವಿಗ್ರಹಗಳಿಗೆ ಅಂಚೆ ಪ್ರಪಂಚದಲ್ಲಿ ವಿಶಿಷ್ಟವಾದ ಸ್ಥಾನವನ್ನು ಕಲ್ಪಿಸಿದ ಪೋಸ್ಟ್ ಮಾಸ್ಟ್‌ರ್ ಜನರಲ್ ಶ್ರೀ ಎಸ್.ರಾಜೇಂದ್ರ ಕುಮಾರ್ ರವರ ಕೊಡುಗೆ ಅವಿಸ್ಮರಣೀಯ.
ಬಿಡುಗಡೆಯದ ಛಾಯಾಚಿತ್ರ ಪೋಸ್ಟ್‌ಕಾರ್ಡ್‍ಗಳ ವಿವರ ಈ ಕೆಳಗಿನಂತಿದೆ:
- ಸಾವಿರ ಕಂಬದ ಬಸದಿ, ಮೂಡುಬಿದಿರೆ
- ಅಮ್ಮನವರ ಬಸದಿಯ 24 ತೀರ್ಥಂಕರರು, ಮೂಡುಬಿದಿರೆ
- ಕೆರೆ ಬಸದಿ, ವರಾಂಗ
- ಭಗವಾನ್ ಭಾಹುಬಲಿ, ಕಾರ್ಕಳ
- ಚತುರ್ಮುಖ ಬಸದಿ, ಕಾರ್ಕಳ
- ಮಾನಸ್ಥಂಭ, ಹಿರಿಯಂಗಡಿ, ಕಾರ್ಕಳ
- ಕೆರೆ ಬಸದಿ, ಕಾರ್ಕಳ
- ಭಗವಾನ್ ಭಾಹುಬಲಿ, ವೇಣೂರು
- ಭಗವಾನ್ ಭಾಹುಬಲಿ, ವೇಣೂರು
- ಭಗವಾನ್ ಭಾಹುಬಲಿ, ಧರ್ಮಸ್ಥಳ
- ಚಂದ್ರನಾಥ ಬಸದಿ, ಧರ್ಮಸ್ಥಳ
– ಜೈನ್ ಹೆರಿಟೇಜ್ ಸೆಂಟರ್ಸ್ ವಾರ್ತಾ ಸೇವೆ