ಉತ್ತಮ ಬ್ರಹ್ಮಚರ್ಯ ಧರ್ಮ
ಉತ್ತಮ ಬ್ರಹ್ಮಚರ್ಯ ಧರ್ಮ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಹತ್ತನೇ ಧರ್ಮದ ವಿಸ್ತೃತ ಚರ್ಚೆ ವಿವಿಧ ಜೈನ ಗ್ರಂಥಗಳಿಂದ ಗಾಥೆಗಳ ಉದಾಹರಣೆಯೊಂದಿಗೆ.
ಪರ್ವರಾಜ ದಶಲಕ್ಷಣ ಪರ್ವ, ದಶಧರ್ಮಗಳನ್ನಾಚರಿಸುವ ಮೂಲಕ ಆತ್ಮೋನ್ನತಿಯನ್ನು ಸಾಧಿಸಲು ಅನುವು ಮಾಡಿಕೊಡುವ ಹಬ್ಬ.
ಮೊದಲು ನಾವು ಧರ್ಮಶಬ್ದದ ವಾಚ್ಯವನ್ನು ಎಂದರೆ ಅರ್ಥವನ್ನು ವಾಚಕರ ಲಕ್ಷಕ್ಕೆ ತರುವೆವು. ಧರ್ಮವೆಂದರೆ ಧಾರಣಮಾಡುವುದು ಎತ್ತಿಹಿಡಿಯುವುದು ಎಂದರ್ಥ. ಸಾಮಾನ್ಯವಾಗಿ ವಸ್ತುವಿನ ಸ್ವಾಭಾವಿಕವಾದ ಗುಣಕ್ಕೆ ಧರ್ಮವೆಂದು ಹೆಸರಿರುವುದು. ಉದಾಹರಣೆ – ಬೆಂಕಿಯಲ್ಲಿ ಉಷ್ಣತೆ, ನೀರಿನಲ್ಲಿ ಶೈತ್ಯ, ಜೀವದಲ್ಲಿ ಜ್ಞಾನ ಸುಖ ಇತ್ಯಾದಿ. ಈ ಧರ್ಮಗಳು ಆಯಾ ಪದಾರ್ಥಗಳನ್ನು ಎತ್ತಿಹಿಡಿಯುವುದೆಂದರೆ ಹೇಗೆ? ಎಂಬ ಪ್ರಶ್ನೆಗೆ, ಇತರ ಪದಾರ್ಥಗಳಿಂದ ಆಯಾ ಪದಾರ್ಥಗಳನ್ನು ಪ್ರತ್ಯೇಕಿಸುವುದು ಅಥವಾ ಒಂದು ಪದಾರ್ಥವು ಮತ್ತೊಂದು ಪದಾರ್ಥವಾಗದಂತೆ ಕಾಪಾಡುವುದು ಎಂದರ್ಥ.
ಧರ್ಮವು ಯಾವ ಪದಾರ್ಥದಲ್ಲಿದೆಯೋ ಆ ಪದಾರ್ಥಕ್ಕೆ ಧರ್ಮಿ ಯೆಂದು ಹೆಸರು. ಒಂದು ವಸ್ತುವಿನಲ್ಲಿ ನಿಯತವಾಗಿರುವ ಧರ್ಮವು ಇತರ ವಸ್ತುವಿನ ಸಂಬಂಧದಿಂದ ವಿಕಾರವನ್ನು ಹೊಂದಿದರೆ ಅದಕ್ಕೆ ಅಧರ್ಮವೆಂದು ಹೆಸರು. ಉದಾಹರಣೆ – ನೀರಿನಲ್ಲಿರುವ ಶೈತ್ಯಗುಣವು ಬೆಂಕಿಯ ಸಂಬಂಧ ದಿಂದಮರೆಯಾಗಿ ಅದರಲ್ಲಿ ಔಷ್ಟವು ವ್ಯಕ್ತವಾಗುವುದು. ನೀರಿನಲ್ಲಿ ಅದೇ ಅಧರ್ಮವಾಗುವುದು, ಹೀಗೆ ಅನಂತವಾದ ಜ್ಞಾನ ಸುಖ ಮೊದಲಾದ ಅನಂತಧರ್ಮಗಳ ಅಖಂಡಪಿಂಡಸ್ವರೂಪನಾದ ಜೀವಾತ್ಮನಲ್ಲಿ ಇತರ ವಸ್ತುವಿನ ಎಂದರೆ ಜಡ-ಕರ್ಮದ ಸಂಬಂಧದಿಂದುಂಟಾಗುವ ಅಜ್ಞಾನ ದುಃಖಾದಿಗಳು ಅಧರ್ಮಗಳಿಂದ ತಿಳಿಯಬೇಕು.
ಲೋಕರೂಢಿಯಲ್ಲಿ ಪರೋಪಕಾರ, ಆಹಾರದಾನ, ವಿದ್ಯಾದಾನ, ಔಷಧದಾನ, ದೇವಪೂಜಾ, ಸ್ತೋತ್ರ ಮೊದಲಾದ ಕಾರ್ಯಗಳಿಗೆ ಧರ್ಮ ಎಂದು ಹೆಸರಿದೆ. ಆದರೆ ಇವು ಆತ್ಮನ ಸ್ವಾಭಾವಿಕಧರ್ಮಗಳಾದ ದಯಾ ಜ್ಞಾನ ಮೊದಲಾದವುಗಳ ಉದ್ಭೋಗಕ್ಕೆ ಕಾರಣಗಳಾಗಿರುವುದರಿಂದ, “ಅನ್ನವೇ ಪ್ರಾಣ” ಎನ್ನುವಂತೆ, ಕಾರಣಗಳಲ್ಲಿ ಕಾರ್ಯಗಳನ್ನು ಉಪಚರಿಸಿ ಹೇಳುವುದಲ್ಲದೆ ತತ್ತ್ವದೃಷ್ಟಿಯಿಂದಲ್ಲ, ಉಪಚಾರದಿಂದಲೂ ಇವು ಆತ್ಮನ ಧರ್ಮಗಳಲ್ಲದೆ ಇತರ ವಸ್ತುಗಳ ಧರ್ಮಗಳಲ್ಲ.
ಮೇಲೆ ಹೇಳಿದಂತೆ ಧರ್ಮವು ಸಾಮಾನ್ಯವಾಗಿ ಜೀವ ಅಜೀವ ಜಡ ಚೈತನ್ಯರೂಪವಾದ ಸಕಲಪದಾರ್ಥಗಳಲ್ಲಿಯೂ ಇರುವುದಾದರೂ ದಶಲಕ್ಷಣ ಧರ್ಮ ಪ್ರಕರಣದಲ್ಲಿ ಜೀವ ಅಥವಾ ಚೈತನ್ಯಪದಾರ್ಥದಲ್ಲಿರುವ ವಿಶೇಷ ಧರ್ಮವೇ ಗ್ರಾಹ್ಯವಾಗಿದೆ. ಅದು ಜೀವೇತರಪದಾರ್ಥಗಳಲ್ಲಿರತಕ್ಕುದಲ್ಲ. ಆ ಧರ್ಮವು ಹತ್ತು ಲಕ್ಷಣಗಳುಳ್ಳುದಾಗಿದೆ. ಆ ಲಕ್ಷಣಗಳಾವುವೆಂದರೆ- ೧ ಉತ್ತಮಕ್ಷಮಾ ೨. ಉತ್ತಮಮಾರ್ದವ ೩. ಉತ್ತಮ ಆರ್ಜವ ೪, ಉತ್ತಮ ಶೌಚ ೫. ಉತ್ತಮ ಸತ್ಯ ೬. ಉತ್ತಮ ಸಂಯಮ ೭.ಉತ್ತಮ ತಪ ೮. ಉತ್ತಮ ತ್ಯಾಗ ೯, ಉತ್ತಮ ಆಕಿಂಚನ್ಯ ೧೦. ಉತ್ತಮ ಬ್ರಹ್ಮಚರ್ಯ, ಇವು ಧರ್ಮದ ಹತ್ತು ಲಕ್ಷಣಳೆಂದಾದರೂ ಭೇದಗಳೆಂದಾದರೂ ಹೇಳಬಹುದು.
ಮೋಕ್ಷಮಾರ್ಗ ಪ್ರಕರಣದಲ್ಲಿ ಸಮ್ಯಗ್ಧರ್ಶನ ಸಮ್ಯಜ್ಞಾನ ಸಮ್ಯಕ್ಕಾರಿತ್ರಗಳು ಮೂರೂ ಸೇರಿ ಮೋಕ್ಷಮಾರ್ಗವಾಗುವುದೆಂದು ಹೇಳಿರುವಂತೆ ತತ್ವಾರ್ಥಸೂತ್ರದಲ್ಲಿಯ “ಉತ್ತಮಕ್ಷಮಾ ಮಾರ್ದವಾರ್ಜವ ಶೌಚ ಸತ್ಯ ಸಂಯಮ ತಪಸ್ತ್ಯಾಗಾಕಿಂಚನ್ಯ ಬ್ರಹ್ಮಚರ್ಯಾಣಿ, ಧರ್ಮ” ಸೂತ್ರದಲ್ಲಿ ಉತ್ತಮಕ್ಷಮಾದಿ ಹತ್ತುಭೇದಗಳುಳ್ಳುದು ಧರ್ಮವೆಂದು ಹೇಳಿದೆ. ಇದರಿಂದ ಉತ್ತಮಕ್ಷಮಾದಿ ದಶಭೇದಗಳು ಸೇರಿ ಧರ್ಮ ವಾಗುವುದೆಂದು ಹೇಳಿದಂತಾದುದು. ಹಾಗೆ ಹೇಳಿರುವ ಉದ್ದೇಶವೇನೆಂದರೆ
ಮೋಕ್ಷೇಚ್ಛೆಯುಳ್ಳ ಮುನಿಯು ಉತ್ತಮಕ್ಷಮಾದಿ ದಶಭೇದಗಳನ್ನೂ ಸಾಧಿಸಿದರೆ ಮಾತ್ರ ಮೋಕ್ಷಸಿದ್ಧಿಯಾಗುವುದಲ್ಲದೆ ಅನ್ಯಥಾ ಸಿದ್ಧಿಯಾಗದು. ಅಥವಾ ಧರ್ಮಧರ್ಮಿಗಳ ಅಭೇದವಿವಕ್ಷತೆಯಿಂದ ಎಂದರೆ ಶುದ್ಧನಿಶ್ಚಯನಯಾಪೇಕ್ಷೆಯಿಂದ ರ್ಮಸ್ವರೂಪಿಯಾದ ಆತ್ಮನೇ ಮೋಕ್ಷಕ್ಕೆ ಕಾರಣನೆಂಬುದ ರಿಂದ ಧರ್ಮಶಬ್ದವು ಏಕವಚನವಾಗಿ ಪ್ರಯೋಗಿಸಲ್ಪಟ್ಟಿರುವುದು. ಧರ್ಮದ ಈ ಹತ್ತು ಅವಯವಗಳನ್ನು ಬೇರೆ ಬೇರೆ ಸ್ವತಂತ್ರವಾಗಿ ಹೇಳಬೇಕೆಂದಿಚ್ಛಿಸಿದಾಗ ಹತ್ತು ಧರ್ಮಗಳೆಂದು ಹೇಳಬಹುದು. ಆದುದರಿಂದ ದಶಲಕ್ಷಣ ಧರ್ಮವೆಂದರೂ ದಶಧರ್ಮಗಳೆಂದರೂ ತಪ್ಪಾಗುವುದಿಲ್ಲ.
ಈ ದಶಧರ್ಮಗಳ ಉಪಾಸನೆಯು ಮುನಿಗಳಿಂದ ಯಾವಾಗಲೂ ಮಾಡಲ್ಪಡತಕ್ಕುದಾಗಿರುವುದರಿಂದ ಅವರಿಗೆ ಒಂದು ಗೊತ್ತಾದ ಕಾಲದ ನಿಯಮವೆಂಬುದಿಲ್ಲ. ಮುನಿಗಳ ಧರ್ಮವನ್ನು ಗೃಹಸ್ಥನು ಯಥಾಶಕ್ತಿಯಾಗಿ ಮತ್ತು ಯಥೋಚಿತವಾಗಿ ಪರಿಪಾಲಿಸುವುದು ತಪ್ಪಾಗುವುದಿಲ್ಲ. ಆದರೆ ಮುನಿಗಳಂತೆ ಗೃಹಸ್ಥನಿಗೆ ಯಾವಾಗಲೂ ಧರ್ಮಪಾಸನೆಯನ್ನು ಮಾಡುವುದಕ್ಕೆ ಅವಕಾಶವಿಲ್ಲದಿರುವುದರಿಂದ ಗೃಹಸ್ಥನಿಗೋಸ್ಕರ ಆಯಾ ಕಾಲಗಳು ಪೂರ್ವಾಚಾರ್ಯರಿಂದ ಗೊತ್ತುಮಾಡಲ್ಪಟ್ಟಿವೆ. ಅದರಂತೆ ಗೃಹಸ್ಥನಿಗೆ ಈ ದಶಧರ್ಮಗಳ ಉಪಾಸನೆಗೆ ಭಾದ್ರಪದ ಶುದ್ಧ ಪಂಚಮಿಯಿಂದ ಚತುರ್ದಶಿವರೆಗೆ –
ಹತ್ತು ದಿನಗಳು ಗೊತ್ತುಮಾಡಲ್ಪಟ್ಟಿವೆ. ಪೌರ್ಣಮಿಯ ದಿವಸ ಈ ವ್ರತವಿಸರ್ಜನೆ. ಈ ದಿನಗಳು ಜೈನರಿಗೆ ಬಹು ಪವಿತ್ರವಾದ ಪರ್ವದಿನಗಳಾಗಿರುತ್ತವೆ. ಇದಕ್ಕೆ ಪರ್ಯುಷಣಪರ್ವವೆಂದೂ ಹೆಸರಿದೆ. ಪರಿತಃ ಉಷಣಂ= ಪರ್ಯುಷಣಂ ಎಂಬ ಬ್ದನಿಷ್ಪತ್ತಿಯಿಂದ ಪರ್ಯುಷಣವೆಂದರೆ ಈ ದಶಧರ್ಮಾನುಷ್ಠಾನದಲ್ಲಿ ಚೆನ್ನಾಗಿ ತತ್ಪರನಾಗಿರುವುದೆಂದು ಭಾವವು.
ಮೇಲೆ ಹೇಳಲ್ಪಟ್ಟ ಹತ್ತು ದಿನಗಳಲ್ಲಿ ಕ್ರಮವಾಗಿ ಹತ್ತು ಧರ್ಮಗಳ ವಿಶೇಷ ಪೂಜಾರಾಧನೆಯು ನಡೆಸಲ್ಪಡಬೇಕೆಂಬ ವಿಧಾನವಿದೆ. ಉತ್ತರ ಹಿಂದುಸ್ಥಾನದಲ್ಲಿ ದಿಗಂಬರ ಶ್ವೇತಾಂಬರ ಸ್ಥಾನಕವಾಸಿ ಈ ಮೂರು ಜೈನಶಾಖೆಯವರೂ ಈ ಪರ್ವವನ್ನು ವಿಶೇಷ ವೈಭವದಿಂದ ಆಚರಿಸುತ್ತಿರುವರು. ಕೆಲವರು ಹತ್ತು ದಿನಗಳಲ್ಲಿಯೂ ಉಪವಾಸವನ್ನು ಮಾಡುವುದುಂಟು. ಆ ಹತ್ತು ದಿವಸಗಳಲ್ಲಿ ತತ್ವಾರ್ಥಸೂತ್ರದ ಹತ್ತು ಅಧ್ಯಾಯಗಳನ್ನು ಓದಿ ಅಥವಾ ಓದಿಸಿ, ಒಂದೊಂದು ದಿವಸ ಒಂದೊಂದು ಅಧ್ಯಾಯದ ಅರ್ಥವನ್ನು ಎಲ್ಲರೂ ಶ್ರವಣ ಮಾಡುವರು. ಹಿಂದುಗಳಿಗೆ ಬ್ರಹ್ಮಸೂತ್ರವು ಹೇಗೆ ಪ್ರಾಮುಖ್ಯವಾದ ಗ್ರಂಥವೋ ಹಾಗೆ ಜೈನರಿಗೆ ತತ್ವಾರ್ಥಸೂತ್ರವು ಪ್ರಾಮುಖ್ಯ ವಾದ ಗ್ರಂಥವಾಗಿದೆ.
ಭಾದ್ರಪದಮಾಸದಲ್ಲಿ ಷೋಡಶಭಾವನಾವತ, ಅನಂತನವ್ರತ, ಚಂದನ ಷಷ್ಟಿವ್ರತೆ, ಪುಷ್ಪಾಂಜಲಿ ವ್ರತ, ರತ್ನತ್ರಯವ್ರತ, ದಶಧರ್ಮವ್ರತ ಮೊದಲಾದ ಅನೇಕ ವ್ರತವಿಧಾನಗಳು ಆಚರಿಸಲ್ಪಡುವುದರಿಂದ ವರ್ಷದಲ್ಲೆಲ್ಲ ಈ ಮಾಸವು ಜೈನರಿಗೆ ಧರ್ಮಸಾಧನೆಗೆ ಬಹುಪ್ರಾಮುಖ್ಯವಾಗಿದೆ. ಇಂತಹ ಪವಿತ್ರ ದಿನಗಳಲ್ಲಿ ಉತ್ತರದೇಶದ ಜೈನಬಾಂಧವರಂತೆ ನಾವು ದಕ್ಷಿಣ ದೇಶದ ಜೈನ ಬಾಂಧವರೂ ಧರ್ಮಾಚರಣೆಯಿಂದ ವಿಶೇಷ ಪುಣ್ಯಾರ್ಜ ನೆಯನ್ನು ಮಾಡಿಕೊಳ್ಳಲು ತಪ್ಪಬಾರದು. ಮುಖ್ಯವಾಗಿ ದಶಲಕ್ಷಣ ಧರ್ಮ ವ್ರತಾನುಷ್ಠಾನವನ್ನು ಪ್ರಚಾರದಲ್ಲಿ ತರುವುದು ಪ್ರತಿಯೋರ್ವ ಬಾಂಧವರ ಪವಿತ್ರ ಕರ್ತವ್ಯವಾಗಿದೆ.
ಉತ್ತಮ ಬ್ರಹ್ಮಚರ್ಯ ಧರ್ಮ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಹತ್ತನೇ ಧರ್ಮದ ವಿಸ್ತೃತ ಚರ್ಚೆ ವಿವಿಧ ಜೈನ ಗ್ರಂಥಗಳಿಂದ ಗಾಥೆಗಳ ಉದಾಹರಣೆಯೊಂದಿಗೆ.
ಉತ್ತಮ ಆಕಿಂಚನ್ಯ ಧರ್ಮ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಒಂಬತ್ತನೇ ಧರ್ಮದ ವಿಸ್ತೃತ ಚರ್ಚೆ ವಿವಿಧ ಜೈನ ಗ್ರಂಥಗಳಿಂದ ಗಾಥೆಗಳ ಉದಾಹರಣೆಯೊಂದಿಗೆ.
ಉತ್ತಮ ತ್ಯಾಗ ಧರ್ಮ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಎಂಟನೇ ಧರ್ಮದ ವಿಸ್ತೃತ ಚರ್ಚೆ ವಿವಿಧ ಜೈನ ಗ್ರಂಥಗಳಿಂದ ಗಾಥೆಗಳ ಉದಾಹರಣೆಯೊಂದಿಗೆ.
ಉತ್ತಮ ತಪೋ ಧರ್ಮ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಏಳನೇ ಧರ್ಮದ ವಿಸ್ತೃತ ಚರ್ಚೆ ವಿವಿಧ ಜೈನ ಗ್ರಂಥಗಳಿಂದ ಗಾಥೆಗಳ ಉದಾಹರಣೆಯೊಂದಿಗೆ.
ಉತ್ತಮ ಸಂಯಮ ಧರ್ಮ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಆರನೇ ಧರ್ಮದ ವಿಸ್ತೃತ ಚರ್ಚೆ ವಿವಿಧ ಜೈನ ಗ್ರಂಥಗಳಿಂದ ಗಾಥೆಗಳ ಉದಾಹರಣೆಯೊಂದಿಗೆ.
ಉತ್ತಮ ಸತ್ಯ ಧರ್ಮ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಐದನೇ ಧರ್ಮದ ವಿಸ್ತೃತ ಚರ್ಚೆ ವಿವಿಧ ಜೈನ ಗ್ರಂಥಗಳಿಂದ ಗಾಥೆಗಳ ಉದಾಹರಣೆಯೊಂದಿಗೆ.
ಉತ್ತಮ ಮಾರ್ದವ ಧರ್ಮ ಅಥವಾ ನಿರಹಂಕಾರ ಧರ್ಮ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಎರಡನೇ ಧರ್ಮದ ವಿಸ್ತೃತ ಚರ್ಚೆ ವಿವಿಧ ಜೈನ ಗ್ರಂಥಗಳಿಂದ ಗಾಥೆಗಳ ಉದಾಹರಣೆಯೊಂದಿಗೆ.
ಉತ್ತಮ ಕ್ಷಮಾ ಧರ್ಮ – ಜೈನಧರ್ಮದ ದಶಲಕ್ಷಣ ಧರ್ಮಗಳಲ್ಲಿನ ಮೊದಲ ಧರ್ಮದ ವಿಸ್ತೃತ ಚರ್ಚೆ ವಿವಿಧ ಜೈನ ಗ್ರಂಥಗಳಿಂದ ಗಾಥೆಗಳ ಉದಾಹರಣೆಯೊಂದಿಗೆ.