ಹಿರೇಹಟ್ಟಿ ಹೊಳಿ (ಖಾನಾಪುರ ತಾಲೂಕು, ಬೆಳಗಾವಿ ಜಿಲ್ಲೆ, ಕರ್ನಾಟಕ), 11 ಆಗಸ್ಟ್ 2019: ಪುರಾತನವಾದ ಜೈನ ತೀರ್ಥಂಕರ ವಿಗ್ರಹಗಳು ಬೆಳಗಾವಿ ಜಿಲ್ಲೆಯ, ಖಾನಾಪುರ ತಾಲೂಕಿನ, ಹಿರೇಹಟ್ಟಿ ಹೊಳಿ ಗ್ರಾಮದಲ್ಲಿ ಪತ್ತೆಯಾಗಿದೆ. ದಿನಾಂಕ 11 ಆಗಸ್ಟ್ 2019ರಂದು ನೆಲ ಅಗೆಯುವ ಸಮಯದಲ್ಲಿ ಈ ವಿಗ್ರಹಗಳು ಪತ್ತೆಯಾಗಿವೆ. ಅವುಗಳಲ್ಲಿ ಒಂದು ಚತುರ್ಮುಖ ವಿಗ್ರಹ ಹಾಗೂ 5 ತೀರ್ಥಂಕರ ವಿಗ್ರಹ (1 ಕಾಯೋತ್ಸರ್ಗ ಭಂಗಿಯಲ್ಲಿನ ಕಲ್ಲಿನ ವಿಗ್ರಹ, 2 ಪದ್ಮಾಸನ ಭಂಗಿಯಲ್ಲಿರುವ ಮಾರ್ಬಲ್ ವಿಗ್ರಹಗಳು, 1 ಪದ್ಮಾಸನ ಭಂಗಿಯಲ್ಲಿರುವ ಲೋಹದ ವಿಗ್ರಹ, 1 ಪದ್ಮಾಸನ ಭಂಗಿಯಲ್ಲಿರುವ ಕಲ್ಲಿನ ವಿಗ್ರಹ)ಗಳನ್ನು ನಾವು ಕಾಣಬಹುದು.
ವಿಗ್ರಹಗಳ ಪ್ರಾಚೀನತೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
– Jain Heritage Centres News Service (Photo Courtesy: Social Media Forward)